ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು.


ನೀನಿಲ್ಲದೆ ನಾನು,
ಚಂದ್ರನಿಲ್ಲದ ಬಾನು.
ತಾರೆಗಳಿರುವರು ಸಾಕಷ್ಟು,
ಆಪ್ತರಿರುವರು ಬೇಕಷ್ಟು.
ಮಿನುಗುವರು, ಬೆಳಗುವರು,
ನೀನಿಲ್ಲದಾಗ ಜೊತೆಯಿರುವರು.
ಆದರೂ ನೀನಿಲ್ಲದೆ ನಾನು,
ಚಂದ್ರನಿಲ್ಲದ ಬಾನು.

ನಿಶೆಯ ನಶೆ ಏರಿಸುವ ಚಂದ್ರ ,
ಬೆಳದಿಂಗಳು ಹರಿಸುವ ನೀನೆ ಚೆಂದ.
ಇರುಳ ಶೃಂಗಾರ ನಿನ್ನಿಂದ ಪೂರ್ಣ,
ಬೆಳಕ ಹರಿಸಲು ತೋರೆ ನೀ ಭೇದ ವರ್ಣ.
ಗೆಲ್ಲುವೆನು ಎಲ್ಲವನು ನೀನಿರಲು ನಾನು.
ನೀನಿಲ್ಲದಿರೆ ನಾನು, ಬರಿದಾದ ಬಾನು.

Comments

bhadra said…
ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ ...

ಹೀಗೆ ಒಂದರ ಅವಲಂಬನ ಇಲ್ಲದೇ ಇನ್ನೊಂದಿರಲಾರದು. ಕವನ ಬಹಳ ಚಂದವಾಗಿ ನಿರೂಪಿಸಲಾಗಿದೆ.

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.