ಹರಟೆ ಕಟ್ಟೆ.




ಒಣ ಹರಟೆಯಲ್ಲಿ ಶುರುವಾದ ಸಂವಾದ,
ಸೃಷ್ಟಿಸಿತು ಬರಿಯ ವಿವಾದ.
ಬೆಳೆಯಿತು ವಾದಕ್ಕೆ ಪ್ರತಿವಾದ,
ಹೆಚ್ಚಾಯಿತು ಕಿರುಚಾಟದ ನಿನಾದ.

ಸಾಗಬೇಕಾದವರು ತಮಾಷೆಯ ಹಡಗಿನಲಿ,
ಎಡವಿದರು ಅಮಾವಾಸ್ಯೆಯ ಮಡುವಿನಲಿ.
ಅರಿಯದೆ ನುಡಿದ ಕೀಟಲೆ ಪದಗಳು,
ನೇರಕೆ ತಟ್ಟವು ಮನಸಿನ ಕದವನು.

ಬೇಡದ ಮಾತಿನ ಹರಟೆಕಟ್ಟೆ,
ಸಿಡಿಸಿತು ಸ್ನೇಹದ ಆಣೆಕಟ್ಟೆ.

Comments

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.