ಕವಿತೆಯೆಂದರೆ ಏನು?


ಕವಿತೆಯೆಂದರೆ ಏನು?
ಏಂದೋಚಿಸಿ ಸುಸ್ತಾದೆ ನಾನು.

ಪ್ರಾಸಬದ್ಧ ರಚನೆಯೆ,
ಅಥವ ಲಯಬದ್ಧ ಬರಹವೇ?
ಛೋಟುದ್ದ ಗದ್ಯವೆ,
ಅಥವ ಲೇಖನಿಯ ಸುಲಭ ಬರವಣಿಗೆಯೇ?

ಅಕ್ಷರಗಳ ಸಮನಾದ ಜೊಡಿಯೊ,
ಅಥವ ಪದಗಳಿಂದ ಲೇಖಕ ಮಾಡುವ ಮೋಡಿಯೋ?
ಅರ್ಥಭರಿತ ವಿವರಣೆಯೊ,
ಅಥವ ಲಯಭರಿತ ನಿರೂಪಣೆಯೋ?

ಓದುಗರ ಹಿಡಿದಿಡುವ ಮಾಯೆಯೊ,
ಆಥವ ಕೌತುಕ ಸೃಷ್ಟಿಸುವ ಛಾಯೆಯೋ?
ಗೊಂದಲದಿ ಸಿಲುಕಿಸುವ ಬಂಧವೊ,
ಅಥವ ಅದರಿಂದ ಬಿಡಿಸುವ ಭಾಷೆಯೋ?

ನೇರ ನುಡಿಗಳ ಸುಲಲಿತ ಮಾಲೆಯೊ,
ಅಥವ ಶಬ್ದ ಭಂಡಾರದ ಜಾತ್ರೆಯೋ?
ಒಂದರ ಹಿಂದೆ ಮತ್ತೊಂದು ಶಬ್ದ ಜೋಡನೆಯೊ,
ಅಥವ ಒಂದರ ಕೆಳಕ್ಕೆ ಮತ್ತೊಂದು ಶಬ್ದ ಸಾಲೋ?

ಭಾವನೆಗಳ ಹಿಡಿದಿಡುವ ಪೂರವೊ,
ಅಥವ ವ್ಯಾಕರಣದ ಸುಲಭ ಶಾಸ್ತ್ರವೋ?
ವಿಶಿಷ್ಟತೆಯ ಕಾಪಾಡಲು ಪದಗಳ ಯೆರ್ರಾಬಿರ್ರಿ ಬಳಕೆಯೊ,
ಅಥವ ಬಿರುದಿಗೆ ಹಲುಬಿ ಓದುಗರ ಕಸಿವಿಸಿಯಾಗಿಸೊ ಕವಿಯ ಕುಟಿಲ ತಂತ್ರವೋ?

ಕಡೆಗೂ ಸಿಗಲಿಲ್ಲ ನನಗೆ ಇದಕುತ್ತರ,
ಸಮಂಜಸವೂ, ಸಮಾಧಾನಕರವೂ ಆದ ಉತ್ತರ.
ನಿಮ್ಮಲ್ಲಿದ್ದರೆ ಈ ಪ್ರಶ್ನೆಗೆ ಸರಿ ಉತ್ತರ.
ತಡ ಬೇಡ ಕೊಡಿ ನನಗೆ ನಿಮ್ಮುತ್ತರದ ವಿವರ.

Comments

Popular posts from this blog

Voice of Kannada

ನೆಗಡಿ.

ಚಪಲ.