ಸಾವಿನ ಸಂಕೋಲೆ.


ಭಾವನೆಗಳು ಮಾತಿಲ್ಲದೆ ಮೌನಿಯಾಗಿವೆ,
ಪರಲೋಕದ ಬಾಂಧವ್ಯತೆ ಸನಿಹವಾಗಿವೆ.
ಜೊತೆ ಕಳೆದ ಮಧುರ ಕ್ಷಣಗಳು ಇನ್ನಿಲ್ಲವಾಗಿದೆ.
ನನಸಾಗಿದ್ದ ದಿನಗಳೆಲ್ಲವೂ ಇಂದು ಕನಸಾಗಿದೆ,
ಇನಿಯನ ನೆನೆ ನೆನೆದು ಮನ ಸೊರಗಿದೆ,
ವಿರಹದ ಬಾಳಿಗೆ ತನು ಕೊರಗಿದೆ.
ಅಂತರಂಗದ ಸಂಗ ಹಿತವೆನಿಸಿದೆ,
ಜವರಾಯನ ಕೃತ್ಯಕ್ಕೆ ಮನವು ತಾ ಮುನಿದಿದೆ.

ಯಾರು ಬಲ್ಲರು ಸಾವಿನ ಆಗಮನವ?
ಯಾರು ತಿಳಿಯರು ಜೀವನದ ನಿರ್ಗಮನವ.
ಬಿಡಿಸಲಾಗದು ಬದುಕಿನ ಜಂಜಾಟದ ಬಲೆಯ,
ಅಳಿಸಲಾಗದು ಅವ ಬಿಟ್ಟು ಹೋದ ನೆನಪಿನ ಕಲೆಯ.
ಸಾವೆಂಬುದು ಅರಗಿಸಲಾಗದ ಕಟು ಸತ್ಯ,
ಬದುಕೇ ಶಾಶ್ವತವೆಂಬುದು ಜನ ನಂಬದ ನಿಜ ಮಿಥ್ಯ.
ಮೋಹ ಮಾಯೆಯ ಈ ಜಗದಲಿ ಸಾವಿಲ್ಲದ ಬಾಳಿಲ್ಲ,
ಸಾವೇ ಇರದ ಮನೆಯ ಸಾಸಿವೆ ಕಾಳಿಲ್ಲ.

Comments

Anonymous said…
Wah.. Super ree.. Jevanada bagge tumba tilkondidira.. channagide.

Simmy..

Popular posts from this blog

ನೆಗಡಿ.

Voice of Kannada

ಚಪಲ.