ಕನ್ನಡಕದ ಸಂಸಾರ


ಅಪ್ಪ ತೊಡುವರು ಸೋಡ ಗ್ಲಾಸ್, ಅದು ಅವರ ಅನಿವಾರ್ಯತೆಗೆ.
ಅಮ್ಮ ತೊಡುವರು ಪ್ಲೇನ್ ಗ್ಲಾಸ್, ಅದು ಅವರ ತಲೆನೋವಿನ ನಿವಾರಣೆಗೆ.
ತಮ್ಮ ತೊಡುವನು ಕೂಲಿಂಗ್ ಗ್ಲಾಸ್, ಅದು ಅವನ ಶೋಕಿಗೆ.
ಅಕ್ಕ ತೊಡುವರು ರ್‍ಈಡಿಂಗ್ ಗ್ಲಾಸ್, ಅದು ಅವರ ಶಾರ್ಟ್ ಸೈಟಿಗೆ.

ನನಗೆ ಅದನ್ನು ತೊಡುವ ಅನಿವಾರ್ಯತೆಯು ಇಲ್ಲ,
ಹಾಗು ನನ್ನಲ್ಲಿ ಶೋಕಿ ಮೊದಲೇ ಇಲ್ಲ.
ಆದರೀಗ ಹಾಕಬೇಕಿದೆ ಲೆನ್ಸ್ಗಳನ್ನು,
ಯೆಕೆಂದರೆ ಈ ಗಣಕ ಯಂತ್ರವು ಕಲ್ಪಿಸಿದೆ ಅದರ ಅವಶ್ಯಕತೆಯನ್ನು.

Comments

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.