ವಿಪರ್ಯಾಸ

ಮನದಾಳದಲ್ಲಿ ಹುದುಗಿದೆ ನೋವು,
ಭಾವನೆಗಳಿವೆ ಆದರಡಿಯಲ್ಲಿ.
ಅದ ಯಾರಿಗು ನಾ ಹೇಳೊಲ್ಲ,
ಇವನ್ನು ಹಂಚಿಕೊಳ್ಳಲು ನನಗ್ಯಾರು ಬೇಕಿಲ್ಲ.

ಬಾಲ್ಯದಿಂದಲೂ ನಾ ಹೀಗೆ,
ನನ್ನ ತಿಳಿಯುವ ಬಗೆಯೆ ಬೇರೆ.
ಕಾಣಿಸುವೆ ಜನ ಸಮೂಹದಲ್ಲಿ,
ಆದರೆ ಉಳಿಯುವೆ ಏಕಾಂಗಿಯಾಗಿ.

ಜೀವನ ನನ್ನದು ಖಾಲಿ ಪುಟ,
ಆದರೆ ಅದರಲ್ಲಿದೆ ಅದೃಶ್ಯ ಅಕ್ಶರಗಳು.
ಇದ ಓದಲು ಬರಿ ಕಣ್ಣುಗಳಿದ್ದರಷ್ಟೆ ಸಾಲದು,
ಬಾಳಿನ ಅಂಧಕಾರದ ರಹಸ್ಯವ ತಿಳಿವ ಒಳಗಣ್ಣಿರಬೇಕು.

Comments

Popular posts from this blog

ನೆಗಡಿ.

Voice of Kannada

ಚಪಲ.