ನನ್ನತನ ನನ್ನೊಂದಿಗಿರಲಿ.


ನನ್ನತನ ನನ್ನೊಂದಿಗಿರಲಿ.
ನನ್ನ ಪರವಾಗಿರಲಿ.
ಇಲ್ಲದ ಸಂಗತಿ ಸೃಷ್ಟಿಸಿ ಚಿತ್ತವ ಅಲುಗಿಸದಿರಿ,
ಸಲ್ಲದ ಮಾತನ್ನಾಡಿ ಮನವ ಕರಗಿಸದಿರಿ,
ಬೇಡದ ಭಾವನೆಗಳ ಬೆಳವಣಿಗೆ ಬೇಡ,
ಕ್ಷೀಣ ಬುದ್ದಿಯ ಪ್ರದರ್ಶನ ಬೇಡ.

ಬೇಕಿಲ್ಲ ನಿಮ್ಮ ಆಲೋಚನೆಯ ಪ್ರಯೋಗ ನನ್ಮೇಲೆ.
ಬೇಕಿಲ್ಲ ನಿಮ್ಮ ಕನಸುಗಳ ಅಳವಡಿಕೆ ನನ್ಮೇಲೆ.
ಕಾಡದಿರಲಿ ನಿಮ್ಮ ದಾಸ್ಯತೆಯ ಹಂಗು.
ತಾಗದಿರಲಿ ನಿಮ್ಮ ಕೊಂಕು ನುಡಿಗಳ ಸೋಂಕು.
ನನ್ನತನ ನನ್ನೊಂದಿಗಿರಲಿ.
ನನ್ನ ಪರವಾಗಿರಲಿ.

Comments

bhadra said…
ನನ್ನತನದ ಬಗ್ಗೆ ಸಂಕ್ಷಿಪ್ತವಾಗಿ ಸ್ಪಷ್ಟವಾಗಿ ಚೆನ್ನಾಗಿ ನಿರೂಪಿಸಿದ್ದೀರಿ. ಇನ್ನೊಂದರಂತೆ ಈ ಆತ್ಮ ಇರುವುದು ಬೇಡ, ಈ ಆತ್ಮನಂತೆ ಇನ್ನೊಂದಾಗುವುದು ಬೇಡ.

ತನ್ನಂತೆ ತಾನು = sui generis

Popular posts from this blog

ನೆಗಡಿ.

Voice of Kannada

ಚಪಲ.