ಅಮಾಯಕ.

ರಸ್ತೆ ಬದಿಯಲಿ, ತುಂಡು ಬಟ್ಟೆಯಲಿ,
ಕೊರಗಿತಾ ಜೀವ ನಿಸ್ಸಹಾಯಕ ಸ್ಥಿತಿಯಲಿ.
ಉಣ್ಣಲು ಅನ್ನವಿಲ್ಲ, ಸಂಸಾರ ಸುಖವಿಲ್ಲ,
ಭಾವನೆಗಳ ಹಂಚಿಕೊಳ್ಳಲು ಯಾರೂ ಇಲ್ಲ.
ಏಕಾಂಗಿತನವ ನೆನೆನೆನೆದು ಮನದಲ್ಲೆ ಕೊರಗಿತು,
ಮರುಕ್ಷಣವೆ ಸಮಾಧಾನಿಸಿ, ಮತ್ತೆ ವಾಸ್ತವತೆಗೆ ಮರಳಿತು.

ಧ್ಯಾನಿಸಲು ದೇವರ ಮೇಲೆ ಭಕ್ತಿ ಇಲ್ಲ,
ದುಡಿಯಲು ದೇಹದಿ ಶಕ್ತಿ ಇಲ್ಲ,
ಕಾಲ ಕಳೆಯಲು ಆಪ್ತೇಷ್ಟರಿಲ್ಲ.
ಜೀವಿಸಲೊಂದು ಸೂರಿಲ್ಲ, ನಗಲೊಂದು ಕಾರಣವಿಲ್ಲ.
ಅಸಹಾಯಕನಾಗಿಹನು ಈ ಅಮಾಯಕ,
ಇವನೇ ಈ ದೇಶದ (ಅ)ನಾಗರಿಕ.

Comments

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.