ನಮ್ಮೆಲ್ಲರ ಸಖ


ಇರುಳ ನೇಸರನಾಗಿ,
ನಿದ್ರೆಯ ಚೋರನಾಗಿ,
ಕನಸುಗಳ ಅಧಿಪತಿಯಾಗಿ,
ನಕ್ಷತ್ರಗಳ ಸೇನಾಧಿಪತಿಯಾಗಿ,
ನನ್ನ ಕವಿತೆಯ ಪ್ರೇರಣೆಯಾಗಿ,
ಮುಗಿಲ ಮಲ್ಲಿಗೆಯಾಗಿ,
ಮೂಡಿರುವನು ಚಂದಿರ ನಮ್ಮೆಲ್ಲರ ಸಖನಾಗಿ.

Comments

bhadra said…
ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ

ಶಾಲಾದಿನಗಳಲ್ಲಿ ಓದಿದ ಈ ಪದ್ಯ ನೆನಪಾಯ್ತು. ನಿಮ್ಮ ಮತ್ತು ಚಂದಿರನ ಸಖ್ಯತೆ ಚಿರಂತನವಾಗಿ ಸಾಗುತ್ತಿರಲಿ

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.