ರೂಪದರ್ಶಿ ಗಣೇಶ


















ಇದೋ ನೋಡಿ ನಮ್ಮ ಗಲ್ಲಿ ಗಣೇಶ,
ವಿವಿಧ ರೂಪದಲ್ಲಿ ರೂಪದರ್ಶಿ ಗಣೇಶ.
ಮಿಂಚಿರುವನು ನಾನಾ ರೂಪದಲ್ಲಿ ವಿಘ್ನೇಷ,
ಯಾರಿಗುಂಟು ಯಾರಿಗಿಲ್ಲ ಇಂತೊಳ್ಳೆ ಅವಕಾಶ.

ಬಾಲಕೃಷ್ಣನಾಗಿ ಜನ್ಮಿಸಿಹನು ಸಮಯಸಾಧಕ,
ರಾಮನಾಗಿ ಕಾಡಿಗೆ ಹೊರಟಿಹನು ಸೀತಾನ್ವೇಷಕ.
ಕ್ರಿಕೆಟ್ಪಟುವಾಗಿ ಕೈಯಲ್ಲಿದೆ ಚೆಂಡದು,
ಫ಼ುಟ್ಬಾಲ್ಪಟುವಾಗಿ ಕಾಲಂಚಲ್ಲಿದೆ ಚೆಂಡದು.

ಟಪೋರಿಯಾಗಿ ಚಂದಾ ವಸೂಲಿ ಮಾಡುತಿಹನು ಪೋಲಿಯು,
ವೈದ್ಯನಾಗಿ ಮಕ್ಕಳಿಗೆ ಹಾಕುತಿಹನು ಪೋಲಿಯೊ.
ದರ್ಜಿಯಾಗಿ ಸೂಜಿ ಹಿಡಿದು ಹೊಲಿಯುವನು ಬಟ್ಟೆಯ,
ನಿರ್ವಾಹಕನಾಗಿ ಪ್ರಯಾಣಿಕರಿಗೆ ಹಂಚುವನು ಚೀಟಿಯ.

ವಂಚಿಸುವನು ಜನರಿಗೆ ಈ ಮಾರ್ವಾಡಿ ವರ್ತಕ,
ಸೀರೆಯನ್ನು ಅಳೆಯುತಿಹನು ಈ ಸೀರೆಯಂಗಡಿ ಸೇವಕ.
ವಕೀಲನಾಗಿ ಜನತೆಗೆ ದೊರಕಿಸುವನು ನ್ಯಾಯವ,
ಅಭ್ಯಂತರನಾಗಿ ಪೀಡಿಸುವನು ಅವನ ವಾಹನ ಮೂಷಕವ.

ಪುಢಾರಿಯಾಗಿ ಟೋಪಿಯೇರಿಸಿ ತೊಟ್ಟಿರುವನು ಖಾದಿಯ,
ಪೂಜಾರಿಯಾಗಿ ಜುಟ್ಟು ಬಿಟ್ಟಿ ಉಟ್ಟಿರುವನು ಕಾವಿಯ.
ಹಜಾಮನಾಗಿ ಕೈಯಲ್ಲಿ ಹಿಡಿದಿರುವನು ಕತ್ತರಿಯ,
ಚಿತ್ರನಟನಾಗಿ ಸೊಂಟವ ಹಿಡಿದಿರುವನು ಪೋರಿಯ.

ಶಿಕ್ಷಕನಾಗಿ ಕೋಲು ಹಿಡಿದು ಕೊಡುವನು ಮಕ್ಕಳಿಗೆ ಕಾಟವ,
ಖೈದಿಯಾಗಿ ಫೋಲಿಸರಿಗೆ ಆಡಿಸುವನು ಆಟವ.

ಮಾಡುತಿಹವು ಇಲಿಗಳು ಸಣ್ಣ ಪುಟ್ಟ ಕೆಲಸವ,
ವಹಿಸಿಕೊಂಡಿವೆ ಬಸ್ ಡ್ರೈವರ್, ಜೈಲರ್ ಕೆಲಸವ.
ಅಂಪೈರ್ ಆಗಿ, ಕಾಂಪೌನ್ಡರ್ ಆಗಿ ಮಾಡುವುವು ಸಹಾಯ,
ಐದು ದಿನಗಳಾದ ಮೇಲೆ ಹೇಳುವರೆಲ್ಲರು ವಿದಾಯ.

ಇದೋ ನೋಡಿ ನಮ್ಮ ಗಲ್ಲಿ ಗಣೇಶ,
ವಿವಿಧ ರೂಪದಲ್ಲಿ ರೂಪದರ್ಶಿ ಗಣೇಶ.

Comments

bhadra said…
ವಾಹ್ ವಾಹ್ ವಾಹ್

ಗಣೇಶೋತ್ಸವದ ಸಂದರ್ಭದಲ್ಲಿ ಕಂಡು ಬರುವ, ಕಂಡರೂ ಮನದಲ್ಲಿ ಉಳಿಯದ ಎಷ್ಟೋ ವಿಷಯಗಳನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ.

ಸೂಪರ್ ಕವನ :)

ಆ ವಿನಾಯಕನು ಒಳ್ಳೆಯದನ್ನು ಮಾಡಲಿ

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.