ನನ್ನ ವಾಕಿಂಗಾಯಣ


ಪ್ರತಿ ದಿನ ನಾ ಮನಸಿಲ್ಲದ ಮನಸ್ಸಿನಿಂದೇಳುವೆ,
ಲಗುಬಗೆಯಿಂದ ನಾ ನಮ್ಮ ಮನೆಯ ಗೇಟ ದಾಟುವೆ.
ನನ್ನ ಸಂಗಾತಿಯಾಗಿ ಬರುವುದು ನನ್ನ ಹರ್ಕ್ಯುಲಿಸ್ ಸೈಕಲ್,
ಕೊಂಚ ಭಾರವಾದರೂ ಪರವಾಗಿಲ್ಲ ಇದು ನನ್ನ ನೆಚ್ಚಿನ ಬೈಸಿಕಲ್.

ಹತ್ತು ನಿಮಿಷದಲ್ಲಿ ನಾ ಸೇರುವೆ ಕಬ್ಬನ್ ಊದ್ಯಾನ,
ಅಲ್ಲಿ ಶುರು ಹಚ್ಚಿಕೊಳ್ಳುವೆ ನಾ ನನ್ನ ಕವಿತೆಯ ವ್ಯಾಖ್ಯಾನ.
ಈ ಮಧ್ಯೆ ಕಾಣುವೆ ತರತರದ ಜನರ,
ಕಾಣಿಸುವರು ಅವರು ಕೂಡ ನಡೆಸಿದಂತೆ ನಿದ್ರಾ ದೇವತೆಯ ಜೊತೆ ಸಮರ.

ಕೆಲವರು ಲಾಫಿಂಗ್ ಥಿರಪಿಯಲ್ಲಿ ನಿರತರಾದರೆ,
ಕೆಲವರು ಟಾಕಿಂಗ್ ಥಿರಪಿಯಲ್ಲಿ ನಿರತ.
ಕೆಲವರು ತಮ್ಮ ದೇಹವನ್ನು ದಣಿಸುವಲ್ಲಿ ನಿರತರಾದರೆ,
ಮತ್ತಲವರು ನಿದ್ರಿಸುವುದರಲ್ಲಿ ನಿರತ.

ಮಹಿಳೆಯರದೇ ಇಲ್ಲಿ ಬೇರೆ ಗುಂಪು,
ಅಲ್ಲಾಗಿರುವುದು ನಿಜವಾದ ವಾಕಿಂಗ್ ತಂಪು.
ಅವರಲ್ಲಿ ನಡೆದಿರುವುದು ಅಡುಗೆ, ಮನೆ ಮಕ್ಕಳ ಬಗ್ಗೆ ಚರ್ಚೆ,
ಹಾಗು ಬೇರೆಯವರ ಮನೆಯಲ್ಲಾಗುವ ವಿಷಯಗಳ ಬಗ್ಗೆ ವಿಮರ್ಶೆ.

ನಾಯಿಗಳಿಗೂ ತಪ್ಪದು ತಮ್ಮ ಮಾಲೀಕರ ಕಾಟ,
ಅವೂ ವಾಕಿಂಗೆ ಬರಲು ಪಡುವವು ಪರದಾಟ.
ಮಾಡುವವು ಅವೂ ತಾಜಾ ಹವಾ ಸೇವನೆ ಪಾಪ,
ಹಾಗು ನಡೆಸುವುವು ಬೇರೆ ಶ್ವಾನಗಳೊಂದಿಗೆ ಸರಸ ಸಲ್ಲಾಪ.

ವಾಕಿಂಗ್, ಜಾಗಿಂಗ್ ಅಲ್ಲದಿದ್ದರು ನಾ ಬರೀ ಸೈಕ್ಲಿಂಗ್ ಮಾಡುವೆ,
ಹೊತ್ತ ನೊಡಿ, ತಡವಾಯಿತೆಂದು ಕೊಂಡಿ, ವಾಪಸ್ ನನ್ನ ಸೈಕಲ್ ಹತ್ತುವೆ.

Comments

bhadra said…
ವಾಕಿಂಗಾಯಣ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಎಂತೆಂಥ ಸ್ಥಿತಿಗಳು ನಮಗೆ ಕಂಡು ಬರುವುದು ಎಂಬುದನ್ನು ಚೆನ್ನಾಗಿ ಅವಲೋಕಿಸಿ ನಮ್ಮ ಮುಂದೆ ಚಿತ್ರಿಸಿದ್ದೀರಿ.

ಸೈಕಲ್ ಆಯಣದ ಬಗ್ಗೆ ಒಂದು ಕವನವನ್ನು ಓದಲು ಕಾಯುತ್ತಿರುವೆ

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.