ನಾನೇಕೆ ಹುಟ್ಟಲಿಲ್ಲ ಅಂದು.
ನಾನೇಕೆ ಹುಟ್ಟಲಿಲ್ಲ ಅಂದು,
ಕೇಳುವೆ ದೇವರಿಗೆ ಮನ ನೊಂದು.
ಬೇಂದ್ರೆ,ಮಾಸ್ತಿ,ಕುವೆಂಪು ತಲೆಮಾರಿನವಳಾಗಿಲ್ಲ ನಾನೇಕೆ?
ಅವರ ಪರಿಚಯದ ಸೌಭಾಗ್ಯ ದಕ್ಕಲಿಲ್ಲ ನನಗೆ ಇದೇಕೆ?
ಅವರ ಕಾಣುವ ಹೆಬ್ಬಯಕೆ ಇದೆ,
ಆದರೆ ಅವರ ಚಿತ್ರಪಟಲಗಳಷ್ಟೆ ಇಲ್ಲಿದೆ.
ಅವರೊಡಗೂಡಿ ಮಾತಾಡುವಾಸೆ ಮನಕಿದೆ,
ಆದರೆ ಅವರ ಸಂದರ್ಶನದ ತುಣುಕುಗಳಷ್ಟೆ ಇಲ್ಲಿದೆ.
ಈ ಮಹಾನ್ ಜೀವಿಗಳು ಅವತರಿಸಿದರಂದು,
ನನ್ನ ಅಸ್ತಿತ್ವವೆ ಇಲ್ಲದ ದಿನದಂದು.
ಮರುಹುಟ್ಟು ಪಡೆದಿರುವರೆ ಇವರು?
ಪಡೆದರೂ ಏಲ್ಲಿರುವರಿವರು?
ನಮ್ಮೊಂದಿಗೆ ಇಂದಿಲ್ಲದಿದ್ದರೂ,
ತಮ್ಮ ಬರಹದಲ್ಲಿ ಶಾಶ್ವತವಾಗಿಹರಿವರು.
ಲೇಖನಿಯಲ್ಲಿ ಕಾಣುವೆ ಅವರ ಬಿಂಬವ,
ಪುಸ್ತಕದಿ ಪಡೆವೆ ಅವರ ಪರಿಚಯವ.
ಅವರಂತೆ ನಾನಾಗುವಾಸೆ,
ನನ್ನ ಕರ್ಮದಿ ಅವರ ಕಾಣುವಾಸೆ.
ನಾನೂ ಸಾಹಿತ್ಯದ ಕೃಷಿಕಳಾಗುವೆ,
ಅವರಂತೆ ಕವಿತೆಯ ಪೈರ ಬೆಳೆಸುವೆ.
ಕೇಳುವೆ ದೇವರಿಗೆ ಮನ ನೊಂದು.
ಬೇಂದ್ರೆ,ಮಾಸ್ತಿ,ಕುವೆಂಪು ತಲೆಮಾರಿನವಳಾಗಿಲ್ಲ ನಾನೇಕೆ?
ಅವರ ಪರಿಚಯದ ಸೌಭಾಗ್ಯ ದಕ್ಕಲಿಲ್ಲ ನನಗೆ ಇದೇಕೆ?
ಅವರ ಕಾಣುವ ಹೆಬ್ಬಯಕೆ ಇದೆ,
ಆದರೆ ಅವರ ಚಿತ್ರಪಟಲಗಳಷ್ಟೆ ಇಲ್ಲಿದೆ.
ಅವರೊಡಗೂಡಿ ಮಾತಾಡುವಾಸೆ ಮನಕಿದೆ,
ಆದರೆ ಅವರ ಸಂದರ್ಶನದ ತುಣುಕುಗಳಷ್ಟೆ ಇಲ್ಲಿದೆ.
ಈ ಮಹಾನ್ ಜೀವಿಗಳು ಅವತರಿಸಿದರಂದು,
ನನ್ನ ಅಸ್ತಿತ್ವವೆ ಇಲ್ಲದ ದಿನದಂದು.
ಮರುಹುಟ್ಟು ಪಡೆದಿರುವರೆ ಇವರು?
ಪಡೆದರೂ ಏಲ್ಲಿರುವರಿವರು?
ನಮ್ಮೊಂದಿಗೆ ಇಂದಿಲ್ಲದಿದ್ದರೂ,
ತಮ್ಮ ಬರಹದಲ್ಲಿ ಶಾಶ್ವತವಾಗಿಹರಿವರು.
ಲೇಖನಿಯಲ್ಲಿ ಕಾಣುವೆ ಅವರ ಬಿಂಬವ,
ಪುಸ್ತಕದಿ ಪಡೆವೆ ಅವರ ಪರಿಚಯವ.
ಅವರಂತೆ ನಾನಾಗುವಾಸೆ,
ನನ್ನ ಕರ್ಮದಿ ಅವರ ಕಾಣುವಾಸೆ.
ನಾನೂ ಸಾಹಿತ್ಯದ ಕೃಷಿಕಳಾಗುವೆ,
ಅವರಂತೆ ಕವಿತೆಯ ಪೈರ ಬೆಳೆಸುವೆ.
Comments
alla kanri neevu bariyo ee praasabaddha saalugaLanna kavite anteera???, mahaan vyaktigaLaada, maasti , bEndre, kuvempu avara kaaladalli huTTakke aase naa nimge... (neevu bardirodu hengide andre, hattane taragatinalli naaNi anta ondu paaTha ittu, adarallo avanu hinge baritidda praasagaLanna...
udaaharaNege, avaLa aLu, ghamanDi, etc...
ivannella nodtidre nanige bejaar aagatte....
bari praasabaddhavaaagi baredare adu kavite aagalla bari praasa ashTe... kavitege kalpane mukhya, adanna COMPUTER mudhe kootu bariyo haagiddidre adralloo intha IT yugadalli, Kuvempu, Bendre thara saaviraaru jana huTTbidtidru... swalpa dina kavi shylakke hogi banni, enadru kalpane bandru barabahudu, devaru oLLedu maadli... jai bharata maate... artha aagdidre kELi innondu sali mail moolaka hELtini...