ತುಂಟ ತಮ್ಮ.
ತಮ್ಮನೆಂಬ ಆಮ್ಮನ ಭಂಟ,
ಸ್ವಭಾವದಲ್ಲಿ ಚೂರು ಒರಟ.
ಓದಿನಲ್ಲಿ ಸ್ವಲ್ಪ ಹಿಂದೆ,
ತುಂಟತನದಿ ಎಂದೂ ಮುಂದೆ.
ಮೊಂಡುತನವ ಬೆಳೆಸಿಕೊಂಡು,
ಛಲವ, ಹಟವ ಇರಿಸಿಕೊಂಡು,
ಗಳಿಸುವನು ಲೋಕ ಜ್ಞಾನವ.
ಕಟ್ಟುವನು ಸ್ನೇಹ ಬಳಗವ.
ಮಕ್ಕಳಲ್ಲಿ ಪ್ರೀತಿಪಾತ್ರ.
ಆಮ್ಮನಿಗೆ ತುಂಬ ಹತ್ರ.
ಆಪ್ಪನಿಗೆ ಹೆದರುವವ,
ಅಕ್ಕನಲ್ಲಿ ಬಾಲ ಬಿಚ್ಚುವನಿವ.
ಅಕ್ಕಳೆಂಬ ಆಕ್ಕರೆಯೊಡತಿ,
ಈ ಸಮಯಸಾಧಕನ ನೆಚ್ಚಿನ ಗೆಳತಿ.
ಅವನ ಹೆಚ್ಚು ಬಲ್ಲಳೀಕೆ.
ಕೀಟಲೆಗೆ ಸಾಟಿ ಈಕೆ.
ತಪ್ಪಿತಸ್ಥ ಅವನ ಮೋರೆ,
ಗುರುತಿಸುವಳು ಅಕ್ಕ ಜಾಣೆ.
ತರತರದಿ ಪ್ರಶ್ನೆ ಹಾಕಿ,
ಕಾಡಿಬೇಡಿ ಗೇಲಿ ಮಾಡಿ,
ಸತ್ಯವ ಅವನಿಂದಲೆ ತಿಳಿವಳು.
ತಪ್ಪಿದ್ದರೆ ಎರಡೇಟು ಹೊಡೆವಳು.
ತಪ್ಪು ಮಾಡಿ, ನೊಂದು ಕೊಂಡು,
ಅಕ್ಕನಿಂದ ಏಟ ತಿಂದು,
ಮಂದ ನಗೆಯ ಒಮ್ಮೆ ಬೀರುವನು.
ಕೋಪವನ್ನು ನಗುವಲ್ಲೆ ಕಾರುವನು.
ಅವಳ ಜಡೆಯ ಹಿಡಿದು ಎಳೆದು,
ಅವಳ ಸನಿಹ ಮತ್ತೆ ಪಡೆದು,
ಸಮಯ ನೋಡಿ, ಪೂಸಿ ಹೊಡೆದು,
ಆಕ್ಕನ ಸಲಿಗೆ ಗೆಲ್ಲ ಬಲ್ಲ ಜಾಣನಿವ.
ಆವಳ ಹೃದಯ ಗೆಲ್ಲೋ ಮಾತಿನ ಮಲ್ಲನಿವ.
ತಮ್ಮನಿಗಿಂತ ಗೆಳೆಯನಿಲ್ಲ,
ಮುಚ್ಚು ಮರೆಯ ಪರದೆ ಇಲ್ಲ.
ತಮ್ಮನಿಂದ ಬಾಳು ಬೆಳಕು.
ಅವನಿಂದ ಜೀವನ ಹೊಸತು.
ಸ್ವಭಾವದಲ್ಲಿ ಚೂರು ಒರಟ.
ಓದಿನಲ್ಲಿ ಸ್ವಲ್ಪ ಹಿಂದೆ,
ತುಂಟತನದಿ ಎಂದೂ ಮುಂದೆ.
ಮೊಂಡುತನವ ಬೆಳೆಸಿಕೊಂಡು,
ಛಲವ, ಹಟವ ಇರಿಸಿಕೊಂಡು,
ಗಳಿಸುವನು ಲೋಕ ಜ್ಞಾನವ.
ಕಟ್ಟುವನು ಸ್ನೇಹ ಬಳಗವ.
ಮಕ್ಕಳಲ್ಲಿ ಪ್ರೀತಿಪಾತ್ರ.
ಆಮ್ಮನಿಗೆ ತುಂಬ ಹತ್ರ.
ಆಪ್ಪನಿಗೆ ಹೆದರುವವ,
ಅಕ್ಕನಲ್ಲಿ ಬಾಲ ಬಿಚ್ಚುವನಿವ.
ಅಕ್ಕಳೆಂಬ ಆಕ್ಕರೆಯೊಡತಿ,
ಈ ಸಮಯಸಾಧಕನ ನೆಚ್ಚಿನ ಗೆಳತಿ.
ಅವನ ಹೆಚ್ಚು ಬಲ್ಲಳೀಕೆ.
ಕೀಟಲೆಗೆ ಸಾಟಿ ಈಕೆ.
ತಪ್ಪಿತಸ್ಥ ಅವನ ಮೋರೆ,
ಗುರುತಿಸುವಳು ಅಕ್ಕ ಜಾಣೆ.
ತರತರದಿ ಪ್ರಶ್ನೆ ಹಾಕಿ,
ಕಾಡಿಬೇಡಿ ಗೇಲಿ ಮಾಡಿ,
ಸತ್ಯವ ಅವನಿಂದಲೆ ತಿಳಿವಳು.
ತಪ್ಪಿದ್ದರೆ ಎರಡೇಟು ಹೊಡೆವಳು.
ತಪ್ಪು ಮಾಡಿ, ನೊಂದು ಕೊಂಡು,
ಅಕ್ಕನಿಂದ ಏಟ ತಿಂದು,
ಮಂದ ನಗೆಯ ಒಮ್ಮೆ ಬೀರುವನು.
ಕೋಪವನ್ನು ನಗುವಲ್ಲೆ ಕಾರುವನು.
ಅವಳ ಜಡೆಯ ಹಿಡಿದು ಎಳೆದು,
ಅವಳ ಸನಿಹ ಮತ್ತೆ ಪಡೆದು,
ಸಮಯ ನೋಡಿ, ಪೂಸಿ ಹೊಡೆದು,
ಆಕ್ಕನ ಸಲಿಗೆ ಗೆಲ್ಲ ಬಲ್ಲ ಜಾಣನಿವ.
ಆವಳ ಹೃದಯ ಗೆಲ್ಲೋ ಮಾತಿನ ಮಲ್ಲನಿವ.
ತಮ್ಮನಿಗಿಂತ ಗೆಳೆಯನಿಲ್ಲ,
ಮುಚ್ಚು ಮರೆಯ ಪರದೆ ಇಲ್ಲ.
ತಮ್ಮನಿಂದ ಬಾಳು ಬೆಳಕು.
ಅವನಿಂದ ಜೀವನ ಹೊಸತು.
Comments
ನಿಮ್ಮ ಎಲ್ಲಾ ಕವನಗಳನ್ನು ಇಲ್ಲಿ ನೋಡಿ ಸಂತಸವಾಯಿತು. Orkutನ ಎಳೆಗಳಲ್ಲಿ ಎಲ್ಲೋ ಚದುರಿಹೋಗಿದ್ದನ್ನೆಲ್ಲ ಇಲ್ಲಿ ಒಟ್ಟುಗೂಡಿಸಿ ಒಳ್ಳೆಯ ಕೆಲಸ ಮಾಡಿದಿರಿ. ಹೀಗೇ ಬರೆಯುತ್ತಿರಿ.
ಮಂಜು
ಗುರುದೇವ ದಯಾ ಕರೊ ದೀನ ಜನೆ