ಪದಬಂಧದ ಜೀವನ.


ಪದಬಂಧವಾಗಿದೆ ನನ್ನೀ ಜೀವನ,
ಇರುವುದಿಲ್ಲಿ ಬರೀ ಸುಳಿವುಗಳ ತಿರುವುಗಳು.
ಬಾಳಿನ ಒಂದು ಪ್ರಶ್ನೆಗೆ ಸಿಕ್ಕಿದರೆ ಸರಿ ಉತ್ತರ,
ತುಂಬಬಲ್ಲೆ ಉಳಿದೆಲ್ಲ ಖಾಲಿ ಡಬ್ಬವ.

ಹರಿಯುವುದು ಕಷ್ಟಗಳು ಮೇಲಿಂದ ಕೆಳಕ್ಕೆ,
ಹಾಯುವುದು ಚಿಂತೆಗಳು ಎಡದಿಂದ ಬಲಕ್ಕೆ.
ಬೇಕಿರುವನೊಬ್ಬ ಸಾಲುತ್ತರಗಳ ಸರದಾರ,
ಜೀವನದ ಪದಬಂಧವ ಖಾಲಿ ಬಿಡದ ಸುಖಧರ.

Comments

..... said…
This comment has been removed by the author.
..... said…
This comment has been removed by the author.
..... said…
This comment has been removed by the author.
..... said…
ಜೀವನದಂಥ ವಿಷಯದ ಬಗ್ಗೆ ಬರೆಯೋದಾದ್ರೆ, ಇನ್ಯಾವುದೋ ವಸ್ತುವಿನ ಹೋಲಿಕೆ ಇದ್ರೆ ಹೆಚ್ಚು ಅರ್ಥಪೂರ್ಣವಾಗಿರುತ್ತೆ ಅನ್ನೋದನ್ನ, ಇಲ್ಲಿ ರಶ್ಮಿಯವರು, ಪದಬಂಧದದ ಉದಾಹರಣೆಯೊಂದಿಗೆ ಮನೋಜ್ಞವಾಗೆ ಚಿತ್ರಿಸಿದ್ದಾರೆ..
ರಶ್ಮಿಯವರ ಅನೇಕ ಕವಿತೆಗಳಿಂದ ಪ್ರಸ್ತುತವಾಗಿರೋದು ಅವರ ವಿಭಿನ್ನ ದೃಷ್ಟಿಕೋನ ಹಾಗೂ ವಸ್ತುವಿನ ಮತ್ತೊಂದು ಮಗ್ಗಲಿನ ಪರಿಚಯ. ಉದಾಹರಣೆಗೆ ಇಲ್ಲೇ ನೋಡಿ,
"ಹರಿಯುವುದು ಕಷ್ಟಗಳು ಮೇಲಿಂದ ಕೆಳಕ್ಕೆ,
ಹಾಯುವುದು ಚಿಂತೆಗಳು ಎಡದಿಂದ ಬಲಕ್ಕೆ..."

ಪದಬಂಧ ಎಷ್ಟು ನೀಟಾಗಿ ಜೀವನಾನ ತೋರಿಸುತ್ತೆ ಅನ್ನೋದರ ಬಗ್ಗೆ ಕವಯಿತ್ರಿ ಬೆಳಕು ಚೆಲ್ಲಿದ್ದಾರೆ....
ಮತ್ತೆ, ಕವಯಿತ್ರಿಯ ಆಸೆ ಬಗ್ಗೆ......? ಇಲ್ ನೋಡಿ...
"ಬೇಕಿರುವನೊಬ್ಬ ಸಾಲುತ್ತರಗಳ ಸರದಾರ....."
ಇನ್ನೇನ್ ಬೇಕು...

ರಶ್ಮಿಯವರೇ ನಿಮ್ಮ ಕಾವ್ಯ ಕೃಷಿಯನ್ನ ಹೀಗೆ ಅನವರತ ಮುಂದುವರಿಸಿ... ಉಜ್ವಲ ಪ್ರತಿಭೆ ನಮಗೆ ದಕ್ಕತ್ತೆ ಅನ್ನೋದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲಾರೀ...
Keep Up Rashmi...
Regards,
Vijay
bhadra said…
ಚಂದದ ದೃಷ್ಟಿಕೋನ :)

Popular posts from this blog

Voice of Kannada

ನೆಗಡಿ.