Posts

Showing posts from 2007

ಸಾವಿನ ಸಂಕೋಲೆ.

Image
ಭಾವನೆಗಳು ಮಾತಿಲ್ಲದೆ ಮೌನಿಯಾಗಿವೆ, ಪರಲೋಕದ ಬಾಂಧವ್ಯತೆ ಸನಿಹವಾಗಿವೆ. ಜೊತೆ ಕಳೆದ ಮಧುರ ಕ್ಷಣಗಳು ಇನ್ನಿಲ್ಲವಾಗಿದೆ. ನನಸಾಗಿದ್ದ ದಿನಗಳೆಲ್ಲವೂ ಇಂದು ಕನಸಾಗಿದೆ, ಇನಿಯನ ನೆನೆ ನೆನೆದು ಮನ ಸೊರಗಿದೆ, ವಿರಹದ ಬಾಳಿಗೆ ತನು ಕೊರಗಿದೆ. ಅಂತರಂಗದ ಸಂಗ ಹಿತವೆನಿಸಿದೆ, ಜವರಾಯನ ಕೃತ್ಯಕ್ಕೆ ಮನವು ತಾ ಮುನಿದಿದೆ. ಯಾರು ಬಲ್ಲರು ಸಾವಿನ ಆಗಮನವ? ಯಾರು ತಿಳಿಯರು ಜೀವನದ ನಿರ್ಗಮನವ. ಬಿಡಿಸಲಾಗದು ಬದುಕಿನ ಜಂಜಾಟದ ಬಲೆಯ, ಅಳಿಸಲಾಗದು ಅವ ಬಿಟ್ಟು ಹೋದ ನೆನಪಿನ ಕಲೆಯ. ಸಾವೆಂಬುದು ಅರಗಿಸಲಾಗದ ಕಟು ಸತ್ಯ, ಬದುಕೇ ಶಾಶ್ವತವೆಂಬುದು ಜನ ನಂಬದ ನಿಜ ಮಿಥ್ಯ. ಮೋಹ ಮಾಯೆಯ ಈ ಜಗದಲಿ ಸಾವಿಲ್ಲದ ಬಾಳಿಲ್ಲ, ಸಾವೇ ಇರದ ಮನೆಯ ಸಾಸಿವೆ ಕಾಳಿಲ್ಲ.

ಪದಬಂಧದ ಜೀವನ.

Image
ಪದಬಂಧವಾಗಿದೆ ನನ್ನೀ ಜೀವನ, ಇರುವುದಿಲ್ಲಿ ಬರೀ ಸುಳಿವುಗಳ ತಿರುವುಗಳು. ಬಾಳಿನ ಒಂದು ಪ್ರಶ್ನೆಗೆ ಸಿಕ್ಕಿದರೆ ಸರಿ ಉತ್ತರ, ತುಂಬಬಲ್ಲೆ ಉಳಿದೆಲ್ಲ ಖಾಲಿ ಡಬ್ಬವ. ಹರಿಯುವುದು ಕಷ್ಟಗಳು ಮೇಲಿಂದ ಕೆಳಕ್ಕೆ, ಹಾಯುವುದು ಚಿಂತೆಗಳು ಎಡದಿಂದ ಬಲಕ್ಕೆ. ಬೇಕಿರುವನೊಬ್ಬ ಸಾಲುತ್ತರಗಳ ಸರದಾರ, ಜೀವನದ ಪದಬಂಧವ ಖಾಲಿ ಬಿಡದ ಸುಖಧರ.

ಅಮಾಯಕ.

ರಸ್ತೆ ಬದಿಯಲಿ, ತುಂಡು ಬಟ್ಟೆಯಲಿ, ಕೊರಗಿತಾ ಜೀವ ನಿಸ್ಸಹಾಯಕ ಸ್ಥಿತಿಯಲಿ. ಉಣ್ಣಲು ಅನ್ನವಿಲ್ಲ, ಸಂಸಾರ ಸುಖವಿಲ್ಲ, ಭಾವನೆಗಳ ಹಂಚಿಕೊಳ್ಳಲು ಯಾರೂ ಇಲ್ಲ. ಏಕಾಂಗಿತನವ ನೆನೆನೆನೆದು ಮನದಲ್ಲೆ ಕೊರಗಿತು, ಮರುಕ್ಷಣವೆ ಸಮಾಧಾನಿಸಿ, ಮತ್ತೆ ವಾಸ್ತವತೆಗೆ ಮರಳಿತು. ಧ್ಯಾನಿಸಲು ದೇವರ ಮೇಲೆ ಭಕ್ತಿ ಇಲ್ಲ, ದುಡಿಯಲು ದೇಹದಿ ಶಕ್ತಿ ಇಲ್ಲ, ಕಾಲ ಕಳೆಯಲು ಆಪ್ತೇಷ್ಟರಿಲ್ಲ. ಜೀವಿಸಲೊಂದು ಸೂರಿಲ್ಲ, ನಗಲೊಂದು ಕಾರಣವಿಲ್ಲ. ಅಸಹಾಯಕನಾಗಿಹನು ಈ ಅಮಾಯಕ, ಇವನೇ ಈ ದೇಶದ (ಅ)ನಾಗರಿಕ.

ಹರಟೆ ಕಟ್ಟೆ.

Image
ಒಣ ಹರಟೆಯಲ್ಲಿ ಶುರುವಾದ ಸಂವಾದ, ಸೃಷ್ಟಿಸಿತು ಬರಿಯ ವಿವಾದ. ಬೆಳೆಯಿತು ವಾದಕ್ಕೆ ಪ್ರತಿವಾದ, ಹೆಚ್ಚಾಯಿತು ಕಿರುಚಾಟದ ನಿನಾದ. ಸಾಗಬೇಕಾದವರು ತಮಾಷೆಯ ಹಡಗಿನಲಿ, ಎಡವಿದರು ಅಮಾವಾಸ್ಯೆಯ ಮಡುವಿನಲಿ. ಅರಿಯದೆ ನುಡಿದ ಕೀಟಲೆ ಪದಗಳು, ನೇರಕೆ ತಟ್ಟವು ಮನಸಿನ ಕದವನು. ಬೇಡದ ಮಾತಿನ ಹರಟೆಕಟ್ಟೆ, ಸಿಡಿಸಿತು ಸ್ನೇಹದ ಆಣೆಕಟ್ಟೆ.

ತುಂಟ ತಮ್ಮ.

Image
ತಮ್ಮನೆಂಬ ಆಮ್ಮನ ಭಂಟ, ಸ್ವಭಾವದಲ್ಲಿ ಚೂರು ಒರಟ. ಓದಿನಲ್ಲಿ ಸ್ವಲ್ಪ ಹಿಂದೆ, ತುಂಟತನದಿ ಎಂದೂ ಮುಂದೆ. ಮೊಂಡುತನವ ಬೆಳೆಸಿಕೊಂಡು, ಛಲವ, ಹಟವ ಇರಿಸಿಕೊಂಡು, ಗಳಿಸುವನು ಲೋಕ ಜ್ಞಾನವ. ಕಟ್ಟುವನು ಸ್ನೇಹ ಬಳಗವ. ಮಕ್ಕಳಲ್ಲಿ ಪ್ರೀತಿಪಾತ್ರ. ಆಮ್ಮನಿಗೆ ತುಂಬ ಹತ್ರ. ಆಪ್ಪನಿಗೆ ಹೆದರುವವ, ಅಕ್ಕನಲ್ಲಿ ಬಾಲ ಬಿಚ್ಚುವನಿವ. ಅಕ್ಕಳೆಂಬ ಆಕ್ಕರೆಯೊಡತಿ, ಈ ಸಮಯಸಾಧಕನ ನೆಚ್ಚಿನ ಗೆಳತಿ. ಅವನ ಹೆಚ್ಚು ಬಲ್ಲಳೀಕೆ. ಕೀಟಲೆಗೆ ಸಾಟಿ ಈಕೆ. ತಪ್ಪಿತಸ್ಥ ಅವನ ಮೋರೆ, ಗುರುತಿಸುವಳು ಅಕ್ಕ ಜಾಣೆ. ತರತರದಿ ಪ್ರಶ್ನೆ ಹಾಕಿ, ಕಾಡಿಬೇಡಿ ಗೇಲಿ ಮಾಡಿ, ಸತ್ಯವ ಅವನಿಂದಲೆ ತಿಳಿವಳು. ತಪ್ಪಿದ್ದರೆ ಎರಡೇಟು ಹೊಡೆವಳು. ತಪ್ಪು ಮಾಡಿ, ನೊಂದು ಕೊಂಡು, ಅಕ್ಕನಿಂದ ಏಟ ತಿಂದು, ಮಂದ ನಗೆಯ ಒಮ್ಮೆ ಬೀರುವನು. ಕೋಪವನ್ನು ನಗುವಲ್ಲೆ ಕಾರುವನು. ಅವಳ ಜಡೆಯ ಹಿಡಿದು ಎಳೆದು, ಅವಳ ಸನಿಹ ಮತ್ತೆ ಪಡೆದು, ಸಮಯ ನೋಡಿ, ಪೂಸಿ ಹೊಡೆದು, ಆಕ್ಕನ ಸಲಿಗೆ ಗೆಲ್ಲ ಬಲ್ಲ ಜಾಣನಿವ. ಆವಳ ಹೃದಯ ಗೆಲ್ಲೋ ಮಾತಿನ ಮಲ್ಲನಿವ. ತಮ್ಮನಿಗಿಂತ ಗೆಳೆಯನಿಲ್ಲ, ಮುಚ್ಚು ಮರೆಯ ಪರದೆ ಇಲ್ಲ. ತಮ್ಮನಿಂದ ಬಾಳು ಬೆಳಕು. ಅವನಿಂದ ಜೀವನ ಹೊಸತು.

ರೂಪದರ್ಶಿ ಗಣೇಶ

Image
ಇದೋ ನೋಡಿ ನಮ್ಮ ಗಲ್ಲಿ ಗಣೇಶ, ವಿವಿಧ ರೂಪದಲ್ಲಿ ರೂಪದರ್ಶಿ ಗಣೇಶ. ಮಿಂಚಿರುವನು ನಾನಾ ರೂಪದಲ್ಲಿ ವಿಘ್ನೇಷ, ಯಾರಿಗುಂಟು ಯಾರಿಗಿಲ್ಲ ಇಂತೊಳ್ಳೆ ಅವಕಾಶ. ಬಾಲಕೃಷ್ಣನಾಗಿ ಜನ್ಮಿಸಿಹನು ಸಮಯಸಾಧಕ, ರಾಮನಾಗಿ ಕಾಡಿಗೆ ಹೊರಟಿಹನು ಸೀತಾನ್ವೇಷಕ. ಕ್ರಿಕೆಟ್ಪಟುವಾಗಿ ಕೈಯಲ್ಲಿದೆ ಚೆಂಡದು, ಫ಼ುಟ್ಬಾಲ್ಪಟುವಾಗಿ ಕಾಲಂಚಲ್ಲಿದೆ ಚೆಂಡದು. ಟಪೋರಿಯಾಗಿ ಚಂದಾ ವಸೂಲಿ ಮಾಡುತಿಹನು ಪೋಲಿಯು, ವೈದ್ಯನಾಗಿ ಮಕ್ಕಳಿಗೆ ಹಾಕುತಿಹನು ಪೋಲಿಯೊ. ದರ್ಜಿಯಾಗಿ ಸೂಜಿ ಹಿಡಿದು ಹೊಲಿಯುವನು ಬಟ್ಟೆಯ, ನಿರ್ವಾಹಕನಾಗಿ ಪ್ರಯಾಣಿಕರಿಗೆ ಹಂಚುವನು ಚೀಟಿಯ. ವಂಚಿಸುವನು ಜನರಿಗೆ ಈ ಮಾರ್ವಾಡಿ ವರ್ತಕ, ಸೀರೆಯನ್ನು ಅಳೆಯುತಿಹನು ಈ ಸೀರೆಯಂಗಡಿ ಸೇವಕ. ವಕೀಲನಾಗಿ ಜನತೆಗೆ ದೊರಕಿಸುವನು ನ್ಯಾಯವ, ಅಭ್ಯಂತರನಾಗಿ ಪೀಡಿಸುವನು ಅವನ ವಾಹನ ಮೂಷಕವ. ಪುಢಾರಿಯಾಗಿ ಟೋಪಿಯೇರಿಸಿ ತೊಟ್ಟಿರುವನು ಖಾದಿಯ, ಪೂಜಾರಿಯಾಗಿ ಜುಟ್ಟು ಬಿಟ್ಟಿ ಉಟ್ಟಿರುವನು ಕಾವಿಯ. ಹಜಾಮನಾಗಿ ಕೈಯಲ್ಲಿ ಹಿಡಿದಿರುವನು ಕತ್ತರಿಯ, ಚಿತ್ರನಟನಾಗಿ ಸೊಂಟವ ಹಿಡಿದಿರುವನು ಪೋರಿಯ. ಶಿಕ್ಷಕನಾಗಿ ಕೋಲು ಹಿಡಿದು ಕೊಡುವನು ಮಕ್ಕಳಿಗೆ ಕಾಟವ, ಖೈದಿಯಾಗಿ ಫೋಲಿಸರಿಗೆ ಆಡಿಸುವನು ಆಟವ. ಮಾಡುತಿಹವು ಇಲಿಗಳು ಸಣ್ಣ ಪುಟ್ಟ ಕೆಲಸವ, ವಹಿಸಿಕೊಂಡಿವೆ ಬಸ್ ಡ್ರೈವರ್, ಜೈಲರ್ ಕೆಲಸವ. ಅಂಪೈರ್ ಆಗಿ, ಕಾಂಪೌನ್ಡರ್ ಆಗಿ ಮಾಡುವುವು ಸಹಾಯ, ಐದು ದಿನಗಳಾದ ಮೇಲೆ ಹೇಳುವರೆಲ್ಲರು ವಿದಾಯ. ಇದೋ ನೋಡಿ ನಮ್ಮ ಗಲ್ಲಿ ಗಣೇಶ, ವಿವಿಧ ರೂಪ...

ಪ್ರಕೃತಿಯಿಂದ ಕಲಿಯೋಣ

Image
ನವೋದಯವು ಅರಳಿಸಿದೆ ನಗು ಮೊಗದ ಮೊಗ್ಗನ್ನು, ಅದರ ಚೈತನ್ಯ ಹಿಗ್ಗಿಸಿದೆ ಭ್ರಮರಗಳು ಹೀರಿ ಮಕರಂದವನು. ಪ್ರಕೃತಿಯಿಂದ ಪಡೆಯೋಣ ಸ್ಪೂರ್ತಿಯ, ಸಾರುವ ಅವರಂತೆ ಪ್ರೀತಿಯ.

ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು.

Image
ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು. ತಾರೆಗಳಿರುವರು ಸಾಕಷ್ಟು, ಆಪ್ತರಿರುವರು ಬೇಕಷ್ಟು. ಮಿನುಗುವರು, ಬೆಳಗುವರು, ನೀನಿಲ್ಲದಾಗ ಜೊತೆಯಿರುವರು. ಆದರೂ ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು. ನಿಶೆಯ ನಶೆ ಏರಿಸುವ ಚಂದ್ರ , ಬೆಳದಿಂಗಳು ಹರಿಸುವ ನೀನೆ ಚೆಂದ. ಇರುಳ ಶೃಂಗಾರ ನಿನ್ನಿಂದ ಪೂರ್ಣ, ಬೆಳಕ ಹರಿಸಲು ತೋರೆ ನೀ ಭೇದ ವರ್ಣ. ಗೆಲ್ಲುವೆನು ಎಲ್ಲವನು ನೀನಿರಲು ನಾನು. ನೀನಿಲ್ಲದಿರೆ ನಾನು, ಬರಿದಾದ ಬಾನು.

ನನ್ನತನ ನನ್ನೊಂದಿಗಿರಲಿ.

Image
ನನ್ನತನ ನನ್ನೊಂದಿಗಿರಲಿ. ನನ್ನ ಪರವಾಗಿರಲಿ. ಇಲ್ಲದ ಸಂಗತಿ ಸೃಷ್ಟಿಸಿ ಚಿತ್ತವ ಅಲುಗಿಸದಿರಿ, ಸಲ್ಲದ ಮಾತನ್ನಾಡಿ ಮನವ ಕರಗಿಸದಿರಿ, ಬೇಡದ ಭಾವನೆಗಳ ಬೆಳವಣಿಗೆ ಬೇಡ, ಕ್ಷೀಣ ಬುದ್ದಿಯ ಪ್ರದರ್ಶನ ಬೇಡ. ಬೇಕಿಲ್ಲ ನಿಮ್ಮ ಆಲೋಚನೆಯ ಪ್ರಯೋಗ ನನ್ಮೇಲೆ. ಬೇಕಿಲ್ಲ ನಿಮ್ಮ ಕನಸುಗಳ ಅಳವಡಿಕೆ ನನ್ಮೇಲೆ. ಕಾಡದಿರಲಿ ನಿಮ್ಮ ದಾಸ್ಯತೆಯ ಹಂಗು. ತಾಗದಿರಲಿ ನಿಮ್ಮ ಕೊಂಕು ನುಡಿಗಳ ಸೋಂಕು. ನನ್ನತನ ನನ್ನೊಂದಿಗಿರಲಿ. ನನ್ನ ಪರವಾಗಿರಲಿ.

ನನ್ನ ವಾಕಿಂಗಾಯಣ

Image
ಪ್ರತಿ ದಿನ ನಾ ಮನಸಿಲ್ಲದ ಮನಸ್ಸಿನಿಂದೇಳುವೆ, ಲಗುಬಗೆಯಿಂದ ನಾ ನಮ್ಮ ಮನೆಯ ಗೇಟ ದಾಟುವೆ. ನನ್ನ ಸಂಗಾತಿಯಾಗಿ ಬರುವುದು ನನ್ನ ಹರ್ಕ್ಯುಲಿಸ್ ಸೈಕಲ್, ಕೊಂಚ ಭಾರವಾದರೂ ಪರವಾಗಿಲ್ಲ ಇದು ನನ್ನ ನೆಚ್ಚಿನ ಬೈಸಿಕಲ್. ಹತ್ತು ನಿಮಿಷದಲ್ಲಿ ನಾ ಸೇರುವೆ ಕಬ್ಬನ್ ಊದ್ಯಾನ, ಅಲ್ಲಿ ಶುರು ಹಚ್ಚಿಕೊಳ್ಳುವೆ ನಾ ನನ್ನ ಕವಿತೆಯ ವ್ಯಾಖ್ಯಾನ. ಈ ಮಧ್ಯೆ ಕಾಣುವೆ ತರತರದ ಜನರ, ಕಾಣಿಸುವರು ಅವರು ಕೂಡ ನಡೆಸಿದಂತೆ ನಿದ್ರಾ ದೇವತೆಯ ಜೊತೆ ಸಮರ. ಕೆಲವರು ಲಾಫಿಂಗ್ ಥಿರಪಿಯಲ್ಲಿ ನಿರತರಾದರೆ, ಕೆಲವರು ಟಾಕಿಂಗ್ ಥಿರಪಿಯಲ್ಲಿ ನಿರತ. ಕೆಲವರು ತಮ್ಮ ದೇಹವನ್ನು ದಣಿಸುವಲ್ಲಿ ನಿರತರಾದರೆ, ಮತ್ತಲವರು ನಿದ್ರಿಸುವುದರಲ್ಲಿ ನಿರತ. ಮಹಿಳೆಯರದೇ ಇಲ್ಲಿ ಬೇರೆ ಗುಂಪು, ಅಲ್ಲಾಗಿರುವುದು ನಿಜವಾದ ವಾಕಿಂಗ್ ತಂಪು. ಅವರಲ್ಲಿ ನಡೆದಿರುವುದು ಅಡುಗೆ, ಮನೆ ಮಕ್ಕಳ ಬಗ್ಗೆ ಚರ್ಚೆ, ಹಾಗು ಬೇರೆಯವರ ಮನೆಯಲ್ಲಾಗುವ ವಿಷಯಗಳ ಬಗ್ಗೆ ವಿಮರ್ಶೆ. ನಾಯಿಗಳಿಗೂ ತಪ್ಪದು ತಮ್ಮ ಮಾಲೀಕರ ಕಾಟ, ಅವೂ ವಾಕಿಂಗೆ ಬರಲು ಪಡುವವು ಪರದಾಟ. ಮಾಡುವವು ಅವೂ ತಾಜಾ ಹವಾ ಸೇವನೆ ಪಾಪ, ಹಾಗು ನಡೆಸುವುವು ಬೇರೆ ಶ್ವಾನಗಳೊಂದಿಗೆ ಸರಸ ಸಲ್ಲಾಪ. ವಾಕಿಂಗ್, ಜಾಗಿಂಗ್ ಅಲ್ಲದಿದ್ದರು ನಾ ಬರೀ ಸೈಕ್ಲಿಂಗ್ ಮಾಡುವೆ, ಹೊತ್ತ ನೊಡಿ, ತಡವಾಯಿತೆಂದು ಕೊಂಡಿ, ವಾಪಸ್ ನನ್ನ ಸೈಕಲ್ ಹತ್ತುವೆ.

ನಮ್ಮೆಲ್ಲರ ಸಖ

Image
ಇರುಳ ನೇಸರನಾಗಿ, ನಿದ್ರೆಯ ಚೋರನಾಗಿ, ಕನಸುಗಳ ಅಧಿಪತಿಯಾಗಿ, ನಕ್ಷತ್ರಗಳ ಸೇನಾಧಿಪತಿಯಾಗಿ, ನನ್ನ ಕವಿತೆಯ ಪ್ರೇರಣೆಯಾಗಿ, ಮುಗಿಲ ಮಲ್ಲಿಗೆಯಾಗಿ, ಮೂಡಿರುವನು ಚಂದಿರ ನಮ್ಮೆಲ್ಲರ ಸಖನಾಗಿ.

ನಾನೇಕೆ ಹುಟ್ಟಲಿಲ್ಲ ಅಂದು.

Image
ನಾನೇಕೆ ಹುಟ್ಟಲಿಲ್ಲ ಅಂದು, ಕೇಳುವೆ ದೇವರಿಗೆ ಮನ ನೊಂದು. ಬೇಂದ್ರೆ,ಮಾಸ್ತಿ,ಕುವೆಂಪು ತಲೆಮಾರಿನವಳಾಗಿಲ್ಲ ನಾನೇಕೆ? ಅವರ ಪರಿಚಯದ ಸೌಭಾಗ್ಯ ದಕ್ಕಲಿಲ್ಲ ನನಗೆ ಇದೇಕೆ? ಅವರ ಕಾಣುವ ಹೆಬ್ಬಯಕೆ ಇದೆ, ಆದರೆ ಅವರ ಚಿತ್ರಪಟಲಗಳಷ್ಟೆ ಇಲ್ಲಿದೆ. ಅವರೊಡಗೂಡಿ ಮಾತಾಡುವಾಸೆ ಮನಕಿದೆ, ಆದರೆ ಅವರ ಸಂದರ್ಶನದ ತುಣುಕುಗಳಷ್ಟೆ ಇಲ್ಲಿದೆ. ಈ ಮಹಾನ್ ಜೀವಿಗಳು ಅವತರಿಸಿದರಂದು, ನನ್ನ ಅಸ್ತಿತ್ವವೆ ಇಲ್ಲದ ದಿನದಂದು. ಮರುಹುಟ್ಟು ಪಡೆದಿರುವರೆ ಇವರು? ಪಡೆದರೂ ಏಲ್ಲಿರುವರಿವರು? ನಮ್ಮೊಂದಿಗೆ ಇಂದಿಲ್ಲದಿದ್ದರೂ, ತಮ್ಮ ಬರಹದಲ್ಲಿ ಶಾಶ್ವತವಾಗಿಹರಿವರು. ಲೇಖನಿಯಲ್ಲಿ ಕಾಣುವೆ ಅವರ ಬಿಂಬವ, ಪುಸ್ತಕದಿ ಪಡೆವೆ ಅವರ ಪರಿಚಯವ. ಅವರಂತೆ ನಾನಾಗುವಾಸೆ, ನನ್ನ ಕರ್ಮದಿ ಅವರ ಕಾಣುವಾಸೆ. ನಾನೂ ಸಾಹಿತ್ಯದ ಕೃಷಿಕಳಾಗುವೆ, ಅವರಂತೆ ಕವಿತೆಯ ಪೈರ ಬೆಳೆಸುವೆ.

ಕವಿತೆಯೆಂದರೆ ಏನು?

Image
ಕವಿತೆಯೆಂದರೆ ಏನು? ಏಂದೋಚಿಸಿ ಸುಸ್ತಾದೆ ನಾನು. ಪ್ರಾಸಬದ್ಧ ರಚನೆಯೆ, ಅಥವ ಲಯಬದ್ಧ ಬರಹವೇ? ಛೋಟುದ್ದ ಗದ್ಯವೆ, ಅಥವ ಲೇಖನಿಯ ಸುಲಭ ಬರವಣಿಗೆಯೇ? ಅಕ್ಷರಗಳ ಸಮನಾದ ಜೊಡಿಯೊ, ಅಥವ ಪದಗಳಿಂದ ಲೇಖಕ ಮಾಡುವ ಮೋಡಿಯೋ? ಅರ್ಥಭರಿತ ವಿವರಣೆಯೊ, ಅಥವ ಲಯಭರಿತ ನಿರೂಪಣೆಯೋ? ಓದುಗರ ಹಿಡಿದಿಡುವ ಮಾಯೆಯೊ, ಆಥವ ಕೌತುಕ ಸೃಷ್ಟಿಸುವ ಛಾಯೆಯೋ? ಗೊಂದಲದಿ ಸಿಲುಕಿಸುವ ಬಂಧವೊ, ಅಥವ ಅದರಿಂದ ಬಿಡಿಸುವ ಭಾಷೆಯೋ? ನೇರ ನುಡಿಗಳ ಸುಲಲಿತ ಮಾಲೆಯೊ, ಅಥವ ಶಬ್ದ ಭಂಡಾರದ ಜಾತ್ರೆಯೋ? ಒಂದರ ಹಿಂದೆ ಮತ್ತೊಂದು ಶಬ್ದ ಜೋಡನೆಯೊ, ಅಥವ ಒಂದರ ಕೆಳಕ್ಕೆ ಮತ್ತೊಂದು ಶಬ್ದ ಸಾಲೋ? ಭಾವನೆಗಳ ಹಿಡಿದಿಡುವ ಪೂರವೊ, ಅಥವ ವ್ಯಾಕರಣದ ಸುಲಭ ಶಾಸ್ತ್ರವೋ? ವಿಶಿಷ್ಟತೆಯ ಕಾಪಾಡಲು ಪದಗಳ ಯೆರ್ರಾಬಿರ್ರಿ ಬಳಕೆಯೊ, ಅಥವ ಬಿರುದಿಗೆ ಹಲುಬಿ ಓದುಗರ ಕಸಿವಿಸಿಯಾಗಿಸೊ ಕವಿಯ ಕುಟಿಲ ತಂತ್ರವೋ? ಕಡೆಗೂ ಸಿಗಲಿಲ್ಲ ನನಗೆ ಇದಕುತ್ತರ, ಸಮಂಜಸವೂ, ಸಮಾಧಾನಕರವೂ ಆದ ಉತ್ತರ. ನಿಮ್ಮಲ್ಲಿದ್ದರೆ ಈ ಪ್ರಶ್ನೆಗೆ ಸರಿ ಉತ್ತರ. ತಡ ಬೇಡ ಕೊಡಿ ನನಗೆ ನಿಮ್ಮುತ್ತರದ ವಿವರ.

ಕನ್ನಡಕದ ಸಂಸಾರ

Image
ಅಪ್ಪ ತೊಡುವರು ಸೋಡ ಗ್ಲಾಸ್, ಅದು ಅವರ ಅನಿವಾರ್ಯತೆಗೆ. ಅಮ್ಮ ತೊಡುವರು ಪ್ಲೇನ್ ಗ್ಲಾಸ್, ಅದು ಅವರ ತಲೆನೋವಿನ ನಿವಾರಣೆಗೆ. ತಮ್ಮ ತೊಡುವನು ಕೂಲಿಂಗ್ ಗ್ಲಾಸ್, ಅದು ಅವನ ಶೋಕಿಗೆ. ಅಕ್ಕ ತೊಡುವರು ರ್‍ಈಡಿಂಗ್ ಗ್ಲಾಸ್, ಅದು ಅವರ ಶಾರ್ಟ್ ಸೈಟಿಗೆ. ನನಗೆ ಅದನ್ನು ತೊಡುವ ಅನಿವಾರ್ಯತೆಯು ಇಲ್ಲ, ಹಾಗು ನನ್ನಲ್ಲಿ ಶೋಕಿ ಮೊದಲೇ ಇಲ್ಲ. ಆದರೀಗ ಹಾಕಬೇಕಿದೆ ಲೆನ್ಸ್ಗಳನ್ನು, ಯೆಕೆಂದರೆ ಈ ಗಣಕ ಯಂತ್ರವು ಕಲ್ಪಿಸಿದೆ ಅದರ ಅವಶ್ಯಕತೆಯನ್ನು.

ವಿಪರ್ಯಾಸ

ಮನದಾಳದಲ್ಲಿ ಹುದುಗಿದೆ ನೋವು, ಭಾವನೆಗಳಿವೆ ಆದರಡಿಯಲ್ಲಿ. ಅದ ಯಾರಿಗು ನಾ ಹೇಳೊಲ್ಲ, ಇವನ್ನು ಹಂಚಿಕೊಳ್ಳಲು ನನಗ್ಯಾರು ಬೇಕಿಲ್ಲ. ಬಾಲ್ಯದಿಂದಲೂ ನಾ ಹೀಗೆ, ನನ್ನ ತಿಳಿಯುವ ಬಗೆಯೆ ಬೇರೆ. ಕಾಣಿಸುವೆ ಜನ ಸಮೂಹದಲ್ಲಿ, ಆದರೆ ಉಳಿಯುವೆ ಏಕಾಂಗಿಯಾಗಿ. ಜೀವನ ನನ್ನದು ಖಾಲಿ ಪುಟ, ಆದರೆ ಅದರಲ್ಲಿದೆ ಅದೃಶ್ಯ ಅಕ್ಶರಗಳು. ಇದ ಓದಲು ಬರಿ ಕಣ್ಣುಗಳಿದ್ದರಷ್ಟೆ ಸಾಲದು, ಬಾಳಿನ ಅಂಧಕಾರದ ರಹಸ್ಯವ ತಿಳಿವ ಒಳಗಣ್ಣಿರಬೇಕು.

ಘಮಂಡಿ.

Image
ನಕ್ಕಾಗ ಅವಳು ಮುತ್ತುದುರುವುದು, ನಡೆದಾಗ ಅವಳು ಮೊಗ್ಗರಳುವುದು. ಹಾಲಿನಂತೆ ಶ್ವೇತ ವರ್ಣದವಳು, ಕುಸುಮದಂತೆ ಸುಕೋಮಲೆ ಇವಳು. ಸಂಪಿಗೆ ಮೂಗು, ನೀಳ ಕಾಯವದು, ಅಪರಿಚಿತನನ್ನು ಸೆಳೆವ ನಯನ ಮಾಯೆಯದು. ಬಳುಕುವಳು ಲತೆಯಂತೆ, ನಡೆಯುವಳು ಹಂಸೆಯಂತೆ, ಅವಳದೊಂದು ಸ್ಪರ್ಶ ಕಾಳ್ಗಿಚ್ಚಿನಂತೆ. ಕಾಣುವರೆಲ್ಲರು ಅವಳದೆ ಕನಸು, ಆವರಿಸಿರುವಳಾಕೆ ಇವರೆಲ್ಲರ ಮನಸು. ಹಾಡುವರೆಲ್ಲರು ಅವಳ ಸೌಂದರ್ಯದ ಗಾನ, ಮಾಡುವರೆಲ್ಲರು ಅವಳ ಮೈಮಾಟದ ಗುಣಗಾನ. ಇವಳ ನೋಡಿ ನೇಸರ ತಾಪವ ಕರಗಿಸುವನು, ಇವಳಿಗಾಗಿ ಚಂದಿರ ಶೀತಲ ಬೆಳಕ ಬೀರುವನು. ಕಾಯುವರು ಆವಳ ನೋಟವ ಕಾತುರದಿಂದ, ಬರುವಳು ವಯ್ಯಾರಿ ಬಲು ಜಂಭದಿಂದ. ಸುರ ಸುಂದರಿಯೆಂದು ತಿಳಿದಿರುವಳೀಕೆ, ಯಾರೇ ಮಾತಾಡಿಸಿದರು ಮುಖ ತಿರುಗಿಸುವಳೀಕೆ. ಸ್ವಭಾವದಲ್ಲೀಕೆ ಬಹಳ ಘಮಂಡಿ, ಆಗೊಮ್ಮೆ ಈಗೊಮ್ಮೆ ಆಗುವಳು ರಣಚಂಡಿ. ತಿಳಿದಿರುವರೆಲ್ಲರು ಈ ಪೋರಿ ನಾಜೂಕೆಂದು, ತಿಳಿಯರು ಇವರು ಈ ನಾರಿಯ ನಾಲಗೆ ಯೆಷ್ಟು ಚೂಪೆಂದು. ಇರುವರು ಇಂಥವರು ಸಾಕಷ್ಟು ಜನ ನಮ್ಮ ನಡುವಿನಲಿ, ಸ್ವಾಭಿಮಾನದ ಹೆಸರಲ್ಲಿ ತೇಲುತಿಹರು ಅಹಮ್ಮಿನಲಿ. ನೀವಾದರು ಅಂತರಂಗದ ಸುಂದರತೆಯ ಅಳೆಯಿರಿ, ಬರೀ ಬಾಹ್ಯ ಸೌಂದರ್ಯಕ್ಕೆ ಮಾರುಹೋಗದಿರಿ.

ಅವಳ ಅಳು.

Image
ಮನದಡಿಯ ನೋವುಗಳು, ಅಳುವಾಗಿ ಹರಿದವು. ಅತ್ತರಷ್ಟೇ ಆವಳಿಗೆ ಸಮಾಧಾನ. ದುಃಖಗಳೆಲ್ಲದರ ಅವಸಾನ. ಅಳುವುದಕ್ಕೂ ಅಳುಕಿವಳಲ್ಲಿ, ಯಾರು ನೋಡುವರೋ ಎಂದು. ನೋಡಿ ಎನೆನ್ನುವರೋ ಎಂದು. ಸೆರಗಿನ ಹಿಂದೆ, ಪರದೆಯ ಹಿಂದೆ, ಅಳುವಳಿವಳು ದೇವರ ಮುಂದೆ. ಕೋಣೆಗೆ ನುಸುಳಿ, ದೀಪವಾರಿಸಿ, ಮಂಚವ ಸೇರುವಳು, ದಿಂಬಿಗೆ ತಲೆ ಇರಿಸುವಳು, ಮೆಲ್ಲಗೆ ರೋದಿಸುವಳು. ಮುಚ್ಚಿಡುವಳು ತನ್ನ ದುಃಖವ ಎಲ್ಲರಿಂದ. ಮನೆಗೆಲಸದಲ್ಲಿ ತೊಡಗಿ , ಹೊರಬರುವಳು ಅದರಿಂದ. ಯಾರಾದರು ಕಂಡರೆ, ಯಾಕಳುವೆ ಎಂದರೆ, ಕಣ್ಣಲ್ಲಿ ಧೂಳು ಬಿತ್ತು. ಉರಿ, ಎಂದು ನೆಪ ಬೇರೆ. ಇವಳ ಚಿಂತೆಗಳಿಗೆ ಕೊನೆಯಿಲ್ಲ. ಅಳುವಿಗೆ ಸ್ಪಷ್ಟ ಕಾರಣವಿಲ್ಲ. ದುಃಖಕ್ಕೂ ಅಳುವಳೀ ನೀರೆ, ಸಂತಸಕ್ಕೂ ಹರಿಸುವಳು ಅಶ್ರುಧಾರೆ. ನಗುವೆಂಬ ಮುಸುಕಿನ ಹಿಂದೆ, ಅಳುವು ಅಡಗಿದೆ, ಅಳುವಿನ ಕುಸುಕುಸು ದನಿ ಸೌಮ್ಯ ಹಾಡಾಗಿದೆ. ಹುದುಗಿರುವ ನೋವದು, ನೋವಾಗಿಯೇ ಕೊನೆಯಾಗುವುದು, ಪ್ರಶ್ನೆಗಳಿಗೆ ಸವಾಲಾಗೇ ಉಳಿಯುವುದು. ತನ್ನ ದುಃಖವ ತಾನೆ ಅನುಭವಿಸುವಳು, ಮನದ ನೋವನು ತಾನೆ ನುಂಗುವಳು. ಕ್ಷಮೆ, ಲಜ್ಜೆ, ಮಮತೆಯ ಸಂಕೇತ ಹೆಣ್ಣು, ಅಳುವಿಗೆ ನಿಜ ಅರ್ಥ ಕೊಡುವಳು ಹೆಣ್ಣು. ಇವಳ ಮೌನವ ನಿರ್ಲಕ್ಷಿಸದಿರಿ, ಇವಳ ಭಾವನೆಗಳ ಕಡೆಗಾಣಿಸದಿರಿ. ಇವಳ ಅಂತರಂಗದ ನೋವ ಅರಿಯಿರಿ, ಇವಳ ಅಗಾಧ ವ್ಯಕ್ತಿತ್ವವ ಗುರುತಿಸಿರಿ.

ಜೀವನದ ದೃಷ್ಟಿಕೋನ

ಕಂಡಾಗ ಕನಸು, ನನಸಾಗಲೆಂದಾಶಿಸಿದೆ, ದೊರೆತಾಗ ಬಲವು, ಛಲವಾಗಲೆಂದಾಶಿಸಿದೆ, ಮುಡಿದಾಗ ಮೊಗ್ಗ, ಮಗುವಾಗಲೆಂದಾಶಿಸಿದೆ, ಸಿಕ್ಕಾಗ ಒಲವು, ಪ್ರೀತಿಯಾಗಲೆಂದಾಶಿಸಿದೆ. ಕರೆದಾಗ ಬಾರದಾದೆ, ನೆನೆದಾಗ ಕಾಣದಾದೆ, ನೆನಪಿನಲ್ಲಿರದ ಹಾಗೆ ನಾ ಮರೆಯಾದೆ, ಅದು ಯಾರ ಶಾಪವೊ ಯೇನೊ, ನಗೆಯಾಗ ಬಂದವಳು, ನಾ ಹಾಸ್ಯದ ಬುಗ್ಗೆಯಾದೆ.