ಜೀವನದ ದೃಷ್ಟಿಕೋನ

ಕಂಡಾಗ ಕನಸು, ನನಸಾಗಲೆಂದಾಶಿಸಿದೆ,
ದೊರೆತಾಗ ಬಲವು, ಛಲವಾಗಲೆಂದಾಶಿಸಿದೆ,
ಮುಡಿದಾಗ ಮೊಗ್ಗ, ಮಗುವಾಗಲೆಂದಾಶಿಸಿದೆ,
ಸಿಕ್ಕಾಗ ಒಲವು, ಪ್ರೀತಿಯಾಗಲೆಂದಾಶಿಸಿದೆ.

ಕರೆದಾಗ ಬಾರದಾದೆ, ನೆನೆದಾಗ ಕಾಣದಾದೆ,
ನೆನಪಿನಲ್ಲಿರದ ಹಾಗೆ ನಾ ಮರೆಯಾದೆ,
ಅದು ಯಾರ ಶಾಪವೊ ಯೇನೊ,
ನಗೆಯಾಗ ಬಂದವಳು, ನಾ ಹಾಸ್ಯದ ಬುಗ್ಗೆಯಾದೆ.

Comments

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.