ನಂಬಿಕೆ.


ಮೊದಲ ಪರೀಕ್ಷೆ ಬರೆದು ಮನೆಗೆ ಬಂದ ಚಿಂಟು, US returned ಚಿಕ್ಕಪ್ಪನ ಕಂಡು ಖುಷಿಯಿಂದ ಕುಣಿದಾಡಿದ. ಆವರ ಕೈಯ್ಯಲ್ಲಿದ್ದ Gift Box ನೋಡಿ, ಅದು ಅವರು ತನಗಾಗಿ ತಂದಿರುವ Video Game ಅಂದುಕೊಂಡು, ಅದನ್ನು ತೆರೆಯಲು ಹೋದ.
ಅಷ್ಟರಲ್ಲಿ ಅವರಮ್ಮ, ಉಳಿದ 5 ಪರೀಕ್ಷೆಗಳಾದ ನಂತರವೇ ನೀನದನ್ನು ನೋಡಬೇಕು ಎಂದಾಗ, ಚಿಂಟುವಿಗೆ ಬೇಸರದ ಜೊತೆ ಅಮ್ಮನ ಮೇಲೆ ಕೋಪವೂ ಬಂತು.
ಅಮ್ಮ ತಂದಿತ್ತ ದೋಸೆಯನ್ನು ತಿನ್ನುತ್ತಿದ್ದಾಗಲೇ, ಚಿಂಟುವಿನ ಸ್ನೇಹಿತ ಗುಂಡ "ಬಾರೋ ಚಿಂಟು Group Studies ಮಾಡೋಣ" ಎಂದು ಕರೆದ. ಚಿಂಟುವಿನ ಅಮ್ಮ "ನಾಳೆ Science Exam ಇದೆ, ತರಲೆ ಮಾಡದೆ, ಓದಿ ರಾತ್ರಿ 9ಕ್ಕೆ ಮನೆಗೆ ಬಾ. ಊಟ ಮಾಡಿ ಮಲಗುವೆಯಂತೆ" ಎಂದರು.
"ಹೂಂ" ಎಂದು ತಲೆಯಾಡಿಸಿದ ಚಿಂಟು, ಗುಂಡನ ಮನೆಗೆ ಹೋಗಿ, ಅಲ್ಲಿ ಅವನ ಜೊತೆ "Spider Man" ಆಡುವಲ್ಲಿ ನಿರತನಾದ.

Comments

rashmi nimmm aella nyano kathegaloo sooper . vibhinnavaagive . hege innasthu bareyiri .

Popular posts from this blog

ನೆಗಡಿ.

Voice of Kannada

ಚಪಲ.