ನನ್ನ ಮುದ್ದು ಕಂದ.
ಮುತ್ತಿಟ್ಟರೆ ನಾಚಿ ನಗುವನು,
ಕರವೆತ್ತಿ ಅಪ್ಪಿಕೋ ಎನುವನು.
ಅಂಬೆಗಾಲಲಿ ತೆವಳುತ ನಲಿಯುತ ಬರುವಾಗ ಅವನು,
ನಂದನವನವೇ ಈ ಮನೆಯು.
ಹಣೆಯ ಆ ತಿಲಕದಲಿ ಕಲಕಲನೆ ಹರಿದಿಹುದು ಜೀವಧಾರೆ.
ಆ ಕಿಲಕಿಲ ಹಾಲ್ನಗೆಯಲಿ ಸುರಿದಿಹುದು ಜೇನಹೊಳೆ.
ಘಲ್ಲೆನುವ ಕಾಲ್ಗೆಜ್ಜೆ ನಾದದಿ ಮಿಂದಿಹುದು ಮನವು,
ದಿನದಿನದ ನವಬಗೆಯ ತೊದಲು ನುಡಿಗಳಿಗೆ ಸೋತಿಹುದು ಮನವು.
ಮಿಂಚು ನೋಟದ ತುಂಟು ನಗೆಯ ಭಂಟನಿವನ್ಯಾರು,
ಪ್ರತಿ ತುತ್ತಿಗೆ ಮುತ್ತ ಗಳಿಸುವ ಚೋರನಿವನ್ಯಾರು.
ಮುದ್ದು ಕಂದನ ಸುಖ ನಿದ್ರೆಯಲಿ ಸಿಹಿ ಸ್ವಪ್ನಗಳಿರಲಿ.
ಮುಗ್ಧ ಮನಸಿನ ಈ ನನ್ನ ಚಂದ್ರಮನು ಎಂದೂ ನಗುತಿರಲಿ.
Comments