ನೆಗಡಿ.


ಕೆಮ್ಮಿದೆ ಗಂಟಲು, ಕಟ್ಟಿದೆ ಮೂಗು,
ಶೀತವೊ, ಉಷ್ಣವೊ ಕಾಣೆನು ನಾನು.
ಊಟದಿ ರುಚಿಯು ಹತ್ತುತ್ತಿಲ್ಲ,
ಅಡುಗೆಯ ವಾಸನೆ ತಿಳಿಯುತ್ತಿಲ್ಲ.

ಸೀನಿಗೆ ಸಿಲುಕಿ ನಲುಗಿದೆ ದೇಹ,
ಶ್ರದ್ಧೆಯೆ ಇಲ್ಲದೆ ಅಲುಗಿದೆ ಕಾಯ.
ಮಾತೇ ಹೊರಡದೆ ಸೊರಗಿದೆ ದನಿಯು,
ಕಣ್ಮರೆಯಾಗಿದೆ ಲವಲವಿಕೆಯ ನಗುವು.

ಮಾತ್ರೆಯ ನುಂಗಿದೆ, ಕುಡಿದೆ ಕಷಾಯ,
ನಿದ್ರೆಯ ಬರಿಸಿದೆ, ಏರಿಸಿ ನಶೆಯ.
ಮದ್ದಿನ ಮತ್ತಲಿ ಸಾಗಿದೆ ಜೀವ,
ಬರಿ ಮೂರೇ ತಾಸು ಇದರ ಪ್ರಭಾವ.

ಪರೀಕ್ಷಿಸಿ ನನ್ನ ಸಂಯಮದಾ ಗಡಿ,
ಜೀವವ ಹಿಂಡಿದೆ ಈ ನೆ-ಗಡಿ.

Comments

Theja said…
WoW ... Really good Negadi..Antha negadi namagu barli endu keli koLLuteve... So navu nimma hage ondu Olle kavite baribodittu... BahaLa chennagi bardideera .. olle prayatna... Onthara different agide.. Good ..Keep it up..
Anonymous said…
Superrrr re nim negadi kavite, ee kavite keeli nan negadi horatu hoiytu. negadi bandre ondu vaara sumnirode sari ----- By Madhukar
Anonymous said…
awesome peom as i have ever seen in kananda (ony about cold)... keep writing more..

By Naresh
ಪ್ರಿಯರೇ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ
bhadra said…
ನೆಗಡಿ - ಮೀರದಿರಲಿ ಸಂಯಮದಾ ಗಡಿ :)
Anonymous said…
this is kannadiga shiva
kannadanannausiru.blogspot.com

kavana tumba channagide
Anonymous said…
ಚಂದ ಬರೀತೀರಿ..
Rashmi Prasad said…
Dhanyawaadagalu Yajnesh,Shiva, Raghavendra :-).

Popular posts from this blog

Voice of Kannada

ಪದಬಂಧದ ಜೀವನ.