ನೆನಪುಗಳು.
ಬರಿದಾದ ಮನದಲಿ , ಆಲಸ್ಯದ ಮಡುವಲಿ,
ಕುಂಟುತ ಬಂದವು ನೆನಪುಗಳು,
ನೆನೆಸಲು ಕಳೆದುಹೋದ "ಆ ದಿನಗಳು".
ಕೆಲ ಜನಗಳ, ಕೆಲ ಸ್ಥಳಗಳ,
ಕೆಲ ಮನಗಳ, ಕೆಲ ದಿನಗಳ,
ಸುತ್ತ ಹರಿಹಾಯ್ದವು ಆ ನೆನಪುಗಳು,
ಮತ್ತೆ ಕಲ್ಪನೆಯ ಲೋಕವ ವಿಸ್ತರಿಸಲು.
ಬೇಡೆನಿಸಿದ ಮಾತುಗಳ ಕೇಳಿಸಿ,
ಇಷ್ಟವಾಗದ ಸನ್ನಿವೇಶವ ಬಣ್ಣಿಸಿ,
ಮನದಂಗಳದಿ ಬೇಸರಿಕೆಯ ರಂಗೋಲಿಯ ಬಿಡಿಸಿದವು ಆ ನೆನಪುಗಳು,
ಸಾಕೆಂದರೂ ಛೇಡಿಸಿ ಮರೆಯಾದವು ಆ ನೆನಪುಗಳು.
ಸರಿದ ಅನುಭವಗಳ ಅವಶೇಷಗಳಡಿಯಿಂದ,
ಕದ್ದು ತರುವುದು , ಮರೆತ ಆ ಸುಂದರ ಕ್ಶಣವ.
ತುಟಿಯಂಚಲಿ ನಗುವಾಗಿ , ವಿಶ್ವಾಸದ ಅಲೆಯಾಗಿ,
ನಲಿಸುವುದು , ನಗಿಸುವುದು ನೊಂದ ಈ ಮನವ.
ಏಕಾಂಗಿತನದ ಸಂಗಾತಿಯು ಈ ನೆನೆಪುಗಳು,
ಏಕೀಕರಣಕೆ ಕಾರಣವೂ ಈ ನೆನೆಪುಗಳು.
ನೆನಪಿರಲಿ , ಕಹಿ ನೆನಪುಗಳ ಹರಿವಿಗೆ ಕಡಿವಾಣವಿರಲಿ.
ಸೊಗಸಾದ ಸಿಹಿ ನೆನಪುಗಳೆಂದೂ ಬತ್ತದಿರಲಿ.
ಕುಂಟುತ ಬಂದವು ನೆನಪುಗಳು,
ನೆನೆಸಲು ಕಳೆದುಹೋದ "ಆ ದಿನಗಳು".
ಕೆಲ ಜನಗಳ, ಕೆಲ ಸ್ಥಳಗಳ,
ಕೆಲ ಮನಗಳ, ಕೆಲ ದಿನಗಳ,
ಸುತ್ತ ಹರಿಹಾಯ್ದವು ಆ ನೆನಪುಗಳು,
ಮತ್ತೆ ಕಲ್ಪನೆಯ ಲೋಕವ ವಿಸ್ತರಿಸಲು.
ಬೇಡೆನಿಸಿದ ಮಾತುಗಳ ಕೇಳಿಸಿ,
ಇಷ್ಟವಾಗದ ಸನ್ನಿವೇಶವ ಬಣ್ಣಿಸಿ,
ಮನದಂಗಳದಿ ಬೇಸರಿಕೆಯ ರಂಗೋಲಿಯ ಬಿಡಿಸಿದವು ಆ ನೆನಪುಗಳು,
ಸಾಕೆಂದರೂ ಛೇಡಿಸಿ ಮರೆಯಾದವು ಆ ನೆನಪುಗಳು.
ಸರಿದ ಅನುಭವಗಳ ಅವಶೇಷಗಳಡಿಯಿಂದ,
ಕದ್ದು ತರುವುದು , ಮರೆತ ಆ ಸುಂದರ ಕ್ಶಣವ.
ತುಟಿಯಂಚಲಿ ನಗುವಾಗಿ , ವಿಶ್ವಾಸದ ಅಲೆಯಾಗಿ,
ನಲಿಸುವುದು , ನಗಿಸುವುದು ನೊಂದ ಈ ಮನವ.
ಏಕಾಂಗಿತನದ ಸಂಗಾತಿಯು ಈ ನೆನೆಪುಗಳು,
ಏಕೀಕರಣಕೆ ಕಾರಣವೂ ಈ ನೆನೆಪುಗಳು.
ನೆನಪಿರಲಿ , ಕಹಿ ನೆನಪುಗಳ ಹರಿವಿಗೆ ಕಡಿವಾಣವಿರಲಿ.
ಸೊಗಸಾದ ಸಿಹಿ ನೆನಪುಗಳೆಂದೂ ಬತ್ತದಿರಲಿ.
Comments
odhide haage summane
nimma kavana chennagide ri
tell me ur gmail name this is kannadanannausiru@gmail.com