Posts

Showing posts with the label Nano Stories.

Nano Stories...

Nano Stories....ಇದು ನನ್ನ ಹೊಸ ಪ್ರಯೋಗ. These are very short stories with a twist at the end. (Not to make you feel bored) ನಾ ಬರೆದ ಕೆಲವು Nano ಕಥೆಗಳ ಸಂಗ್ರಹ ಇಲ್ಲಿವೆ.

ನಂಬಿಕೆ.

Image
ಮೊದಲ ಪರೀಕ್ಷೆ ಬರೆದು ಮನೆಗೆ ಬಂದ ಚಿಂಟು, US returned ಚಿಕ್ಕಪ್ಪನ ಕಂಡು ಖುಷಿಯಿಂದ ಕುಣಿದಾಡಿದ. ಆವರ ಕೈಯ್ಯಲ್ಲಿದ್ದ Gift Box ನೋಡಿ, ಅದು ಅವರು ತನಗಾಗಿ ತಂದಿರುವ Video Game ಅಂದುಕೊಂಡು, ಅದನ್ನು ತೆರೆಯಲು ಹೋದ. ಅಷ್ಟರಲ್ಲಿ ಅವರಮ್ಮ, ಉಳಿದ 5 ಪರೀಕ್ಷೆಗಳಾದ ನಂತರವೇ ನೀನದನ್ನು ನೋಡಬೇಕು ಎಂದಾಗ, ಚಿಂಟುವಿಗೆ ಬೇಸರದ ಜೊತೆ ಅಮ್ಮನ ಮೇಲೆ ಕೋಪವೂ ಬಂತು. ಅಮ್ಮ ತಂದಿತ್ತ ದೋಸೆಯನ್ನು ತಿನ್ನುತ್ತಿದ್ದಾಗಲೇ, ಚಿಂಟುವಿನ ಸ್ನೇಹಿತ ಗುಂಡ "ಬಾರೋ ಚಿಂಟು Group Studies ಮಾಡೋಣ" ಎಂದು ಕರೆದ. ಚಿಂಟುವಿನ ಅಮ್ಮ "ನಾಳೆ Science Exam ಇದೆ, ತರಲೆ ಮಾಡದೆ, ಓದಿ ರಾತ್ರಿ 9ಕ್ಕೆ ಮನೆಗೆ ಬಾ. ಊಟ ಮಾಡಿ ಮಲಗುವೆಯಂತೆ" ಎಂದರು. "ಹೂಂ" ಎಂದು ತಲೆಯಾಡಿಸಿದ ಚಿಂಟು, ಗುಂಡನ ಮನೆಗೆ ಹೋಗಿ, ಅಲ್ಲಿ ಅವನ ಜೊತೆ "Spider Man" ಆಡುವಲ್ಲಿ ನಿರತನಾದ.

ಹತಾಶೆ.

Image
March 31ರಂದು, ಕಿಕ್ಕಿರಿದ ಬಸ್ಸಿನಿಂದ ಹೇಗೋ ಕಷ್ಟಪಟ್ಟು ತನ್ನ ಸ್ಟಾಪ್ ಬಂದಾಗ ಕೆಳಗಿಳಿದ ಸರ್ಕಾರಿ ನೌಕರ ರಮೇಶನ ಗಮನಕ್ಕೆ ಮೊದಲು ಬಂದದ್ದು, ತನ್ನ ಕಿತ್ತುಹೋದ ಚಪ್ಪಲಿ. ಅಲ್ಲಿಯೆ ಹತ್ತಿರದಲ್ಲಿದ್ದ ಚಮ್ಮಾರನ ಅಂಗಡಿ ಕಾಣಿಸಿದಾಗ, ಮೊಗದಲ್ಲಿ ಮೂಡಿದ ಮಂದಹಾಸ ಹತಾಶೆಗೆ ಪರಿವರ್ತನೆಯಾಗಿದ್ದು, ಚಿಲ್ಲರೆ ತೆಗೆಯಲು ಜೇಬಿಗೆ ಕೈ ಹಾಕಿ, Pickpocket ಆಗಿದೆ ಎಂದು ಗೊತ್ತಾದಾಗ.

ಕಣ್ಮರೆ.

ವಠಾರದಲ್ಲಿ "ರಸಿಕ ರಾಜ" ನೆಂದೇ ಪ್ರಸಿದ್ದನಾಗಿದ್ದ ವೆಂಕಿ, ಸ್ನೇಹಿತರೊಂದಿಗೆ ಕಾಫಿಗಾಗಿ, For a change, ರಸ್ತೆ ಬದಿಯಲ್ಲಿದ್ದ "Upahaara Saagara" ದ ಬದಲು, ಹಿಂಬದಿಯ ರಸ್ತೆಯ "Coffee Day"ಗೆ ಹೋದ. ಆಲ್ಲಿ ಕಾಫಿಯನ್ನು ಆಸ್ವಾದಿಸಿದ ಎಲ್ಲರೂ, ವಠಾರಕ್ಕೆ ವಾಪಸಾದಾಗ, ವೆಂಕಿ ನಾಪತ್ತೆಯಾಗಿದ್ದ.

ಸಂಜೆ 6 ರ ನಂತರ.

Image
ಸಮಯ 6 ಆಯಿತು, PC ShutDown ಮಾಡಿ, ಮೆಟ್ಟಿಲಿಳಿಯುತ್ತಿದ್ದ ಸುಶ್ಮಳಿಗೆ Receptionನಲ್ಲಿ Project Manager ಧ್ವನಿ ಕೇಳಿಸಿತು. ತಕ್ಷಣ ಅವಳು Cell Phoneನ Switch Off ಮಾಡಿ, Cafeteria ಕಡೆಗೆ ಕಾಲ್ಕಿತ್ತಳು.

ನಿಟ್ಟುಸಿರು.

ತಿರುಗುತ್ತಿದ್ದ Fan,Current ಹೋದ ಕಾರಣ ನಿಂತು ಹೋಯಿತು. Fanನಿನೆಡೆಗೆ ನೋಡಿದ ಶ್ರುತಿ, "ಛೆ! ಆಗಲೇ ನಾ Mobile Chargige ಇಡಬೇಕಿತ್ತು" ಎಂದು ಮನಸ್ಸಿನಲ್ಲೇ ತನ್ನ ಸೋಮಾರಿತನಕೆ ಹಿಡಿಶಾಪ ಹಾಕಿದಳು.ಚೂರು ಬೇಜಾರಿನಲ್ಲಿದ್ದ ಆಕೆ, ಪದೇ ಪದೇ ಫೋನಿನೆಡೆಗೆ ಕಣ್ಣಾಡಿಸುತ್ತಿದಳು. ಅಷ್ಟರಲ್ಲಿ, ಅಮ್ಮ ಊಟಕ್ಕೆ ಬಾ ಎಂದು ಕರೆದಾಗ, ಇಲ್ಲಿ Mobile ರಿಂಗಣಿಸತೊಡಗಿತು. ಭರತನ Call ಇರಬಹುದೇನೋ ಎಂದು Call Receive ಮಾಡುವಷ್ಟರಲ್ಲಿ, Battery ಕೂಡ ಮುಗಿದು, Call Cut ಆಯಿತು. ಇದನ್ನೆಲ್ಲಾ ನೋಡುತ್ತಿದ್ದ ಅಮ್ಮ ನಿಟ್ಟುಸಿರಿಟ್ಟರು.

Nano Stories...

Nano Stories....ಇದು ನನ್ನ ಹೊಸ ಪ್ರಯೋಗ. These are very short stories with a twist at the end. (Not to make you feel bored) ನಾ ಬರೆದ ಕೆಲವು Nano ಕಥೆಗಳ ಸಂಗ್ರಹ ಮೇಲಿವೆ.