ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು.
ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು. ತಾರೆಗಳಿರುವರು ಸಾಕಷ್ಟು, ಆಪ್ತರಿರುವರು ಬೇಕಷ್ಟು. ಮಿನುಗುವರು, ಬೆಳಗುವರು, ನೀನಿಲ್ಲದಾಗ ಜೊತೆಯಿರುವರು. ಆದರೂ ನೀನಿಲ್ಲದೆ ನಾನು, ಚಂದ್ರನಿಲ್ಲದ ಬಾನು. ನಿಶೆಯ ನಶೆ ಏರಿಸುವ ಚಂದ್ರ , ಬೆಳದಿಂಗಳು ಹರಿಸುವ ನೀನೆ ಚೆಂದ. ಇರುಳ ಶೃಂಗಾರ ನಿನ್ನಿಂದ ಪೂರ್ಣ, ಬೆಳಕ ಹರಿಸಲು ತೋರೆ ನೀ ಭೇದ ವರ್ಣ. ಗೆಲ್ಲುವೆನು ಎಲ್ಲವನು ನೀನಿರಲು ನಾನು. ನೀನಿಲ್ಲದಿರೆ ನಾನು, ಬರಿದಾದ ಬಾನು.