Posts

Showing posts from 2010

ಬೆಲೆ ಏರಿಕೆಯ ಬಿಸಿ.

ಯಾವತ್ತೂ ಅಡುಗೆ ಮನೆಯ ಕಡೆಗೆ ತಿರುಗಿಯೂ ನೋಡದ ವನಿತಾ, ಇವತ್ತೇನೋ ಹೊಸದಾಗಿ ಮನೆಯವರಿಗೆಲ್ಲಾ ಸೂಪ್ ಮಾಡಲು ಮನೆಯಲ್ಲಿದ್ದ ೪ ಕಿಲೋ ಟೊಮ್ಯಾಟೋ ಹಾಗೂ ಈರುಳ್ಳಿ ಬಳಸಿದ್ದಳು. ಅಮ್ಮನಿಂದ ಹೊಗಳಿಕೆ ಸಿಗುವುದೆಂದು ಎಣಿಸಿದ್ದವಳಿಗೆ ಬೈಗುಳದ ಬಿಸಿ ತಟ್ಟಿತು.

ಚಪಲ.

ಮಗುವಿನ ನೆಗಡಿ ನಿವಾರಣೆಗೆಂದು ತಂದಿದ್ದ ಒಂದು ವೊಳ್ಳೆಯಷ್ಟು ಸಾರಾಯಿಯನ್ನೂ ಕುಡುಕ ಗಂಡ ಬಿಡಲಿಲ್ಲ.

ಕಂಜೂಸ್ ರಾಧಕ್ಕ

ಮನೆಯಲಿ ಕಾಫೀ ಪುಡಿ ಹಾಗೂ ಸಕ್ಕರೆ ಇಲ್ಲದ್ದು ನೋಡಿದ ರಾಧಕ್ಕ ಪಕ್ಕದ್ಮನೆ ಸೀತಮ್ಮನ ಮನೆಯಿಂದ ಅದನ್ನು ಎರವಲು ತಂದು ಗ್ಯಾಸಿಗೆ ಹಾಲೇರಿಸಿದಾಗಲೇ ಹಾಲು ಒಡೆಯಬೇಕೆ?