ನೆಗಡಿ.

ಕೆಮ್ಮಿದೆ ಗಂಟಲು, ಕಟ್ಟಿದೆ ಮೂಗು, ಶೀತವೊ, ಉಷ್ಣವೊ ಕಾಣೆನು ನಾನು. ಊಟದಿ ರುಚಿಯು ಹತ್ತುತ್ತಿಲ್ಲ, ಅಡುಗೆಯ ವಾಸನೆ ತಿಳಿಯುತ್ತಿಲ್ಲ. ಸೀನಿಗೆ ಸಿಲುಕಿ ನಲುಗಿದೆ ದೇಹ, ಶ್ರದ್ಧೆಯೆ ಇಲ್ಲದೆ ಅಲುಗಿದೆ ಕಾಯ. ಮಾತೇ ಹೊರಡದೆ ಸೊರಗಿದೆ ದನಿಯು, ಕಣ್ಮರೆಯಾಗಿದೆ ಲವಲವಿಕೆಯ ನಗುವು. ಮಾತ್ರೆಯ ನುಂಗಿದೆ, ಕುಡಿದೆ ಕಷಾಯ, ನಿದ್ರೆಯ ಬರಿಸಿದೆ, ಏರಿಸಿ ನಶೆಯ. ಮದ್ದಿನ ಮತ್ತಲಿ ಸಾಗಿದೆ ಜೀವ, ಬರಿ ಮೂರೇ ತಾಸು ಇದರ ಪ್ರಭಾವ. ಪರೀಕ್ಷಿಸಿ ನನ್ನ ಸಂಯಮದಾ ಗಡಿ, ಜೀವವ ಹಿಂಡಿದೆ ಈ ನೆ-ಗಡಿ.